UK Express Logo

ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ಪುನರಾರಂಭ

By UKExpress on 9/9/2026

ಕಾರವಾರ: ಕಾರವಾರ ಅಂಚೆ ವಿಭಾಗದ ವ್ಯಾಪ್ತಿಯ 19 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಹಾಗೂ ನವೀಕರಣ ಸೇವೆಗಳನ್ನು ಪುನಃ ಆರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸಮೀಪದ ಅಂಚೆ ಕಚೇರಿಯಲ್ಲಿರುವ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಸೇವೆ ಪಡೆಯಬಹುದಾಗಿದೆ.

ಆಧಾರ್ ಸೇವೆ ಲಭ್ಯವಿರುವ ಅಂಚೆ ಕಚೇರಿಗಳು ಮತ್ತು ಸಂಪರ್ಕ ಸಂಖ್ಯೆಗಳು:

ಕಾರವಾರ ಪ್ರಧಾನ ಅಂಚೆ ಕಚೇರಿ: 08382-221327 ಕುಮಟಾ ಪ್ರಧಾನ ಅಂಚೆ ಕಚೇರಿ: 08386-222080 ಅಂಕೋಲಾ ಮುಖ್ಯ ಅಂಚೆ ಕಚೇರಿ: 08388-230207 ಅವರ್ಸಾ ಅಂಚೆ ಕಚೇರಿ: 08388-248233 ಭಟ್ಕಳ ಅಂಚೆ ಕಚೇರಿ: 08385-226507 ಗೇರುಸೊಪ್ಪ ಜ್ಯೋತಿನಗರ ಅಂಚೆ ಕಚೇರಿ: 08387-268221 ಗೋಕರ್ಣ ಅಂಚೆ ಕಚೇರಿ: 08386-256130 ಹಡಿನಬಾಳ ಅಂಚೆ ಕಚೇರಿ: 08387-279537 ಹಳಗಾ ಅಂಚೆ ಕಚೇರಿ: 08382-257021 ಹೆರವಟ್ಟಾ ಅಂಚೆ ಕಚೇರಿ: 08386-222096 ಹೊನ್ನಾವರ ಅಂಚೆ ಕಚೇರಿ: 08387-220251 ಕೈಗಾ ಅಂಚೆ ಕಚೇರಿ: 08382-254820 ಐಡಿಸಿ ಕಾರವಾರ: 08382-227399 ಕೋಡಿಬಾಗ ಅಂಚೆ ಕಚೇರಿ: 08382-225420 ಮಂಕಿ ಅಂಚೆ ಕಚೇರಿ: 08387-257730 ಮುರ್ಡೇಶ್ವರ ಅಂಚೆ ಕಚೇರಿ: 08385-268526 ನಂದನಗದ್ದಾ ಅಂಚೆ ಕಚೇರಿ: 08382-225322 ಸದಾಶಿವಗಡ ಅಂಚೆ ಕಚೇರಿ: 08382-265721 ಶಿರಾಲಿ ಅಂಚೆ ಕಚೇರಿ: 08385-258153

ಸಾರ್ವಜನಿಕರು ಆಧಾರ್‌ಗೆ ಸಂಬಂಧಿಸಿದ ಅಗತ್ಯ ಸೇವೆಗಳಿಗಾಗಿ ಸಮೀಪದ ಕೇಂದ್ರಕ್ಕೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.