UK Express Logo

ಕಾರವಾರ ನೇವಲ್ ಬೇಸ್‌ನ ಸಿವಿಲಿಯನ್ ಸಿಬ್ಬಂದಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ

By UKExpress on 9/9/2026

ಕಾರವಾರ: ಕಾರವಾರ ನೇವಲ್ ಬೇಸ್‌ನಲ್ಲಿ ಸಿವಿಲಿಯನ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮನೋಜ್ ರೀಪು ನಾಯ್ಕ (37) ಅವರು ಆ.26ರಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ನಾರಗೇರಿ, ಶಿರವಾಡ ನಿವಾಸಿ ಮನೋಜ್ ರೀಪು ನಾಯ್ಕ ಅವರು ಆ.26ರಂದು ಬೆಳಗ್ಗೆ 5 ಗಂಟೆಗೆ ಕಾರವಾರದ ದೇವಳಿವಾಡದಿಂದ ಅಂಕೋಲಾದ ಬಾಳೆಗುಳಿಯಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ತೆರಳಿದ್ದರು. ಬಳಿಕ ಯಾರಿಗೂ ಮಾಹಿತಿ ನೀಡದೆ ಮನೆಗೆ ಮರಳದೇ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವ ಮನೋಜ್ ನಾಯ್ಕ ಅವರು ಬಿಳಿ ಗೋಧಿ ಬಣ್ಣ, ದುಂಡನೆಯ ಮುಖ, ಸಾಧಾರಣ ತೆಳ್ಳನೆಯ ಮೈಕಟ್ಟು ಹಾಗೂ ಸುಮಾರು 6 ಅಡಿ ಎತ್ತರ ಹೊಂದಿದ್ದಾರೆ. ಮನೆಯಿಂದ ತೆರಳುವಾಗ ಬಿಳಿ ಬಣ್ಣದ ಪುಲ್‌ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಅವರು ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ.

ಈ ಚಹರೆಯ ವ್ಯಕ್ತಿ ಸಾರ್ವಜನಿಕರಿಗೆ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಕಾರವಾರ ಶಹರ ಪೊಲೀಸ್ ಠಾಣೆ: 9480805230 ಅಥವಾ ಕಾರವಾರ ಪೊಲೀಸ್ ಉಪನಿರೀಕ್ಷಕರು: 08382-226333 ಸಂಪರ್ಕಿಸುವಂತೆ ಕಾರವಾರ ಶಹರ ಪೊಲೀಸ್ ಠಾಣೆ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.