
ಕಾರವಾರ: 2026-27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 15 ಶಿಕ್ಷಕರು ಆಯ್ಕೆಯಾಗಿದ್ದಾರೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಐವರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರದ ಕೋಡಿಬಾಗ ನಂ-2 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರೀ ವಿಶಾಂತ ನಾಯ್ಕ, ಅಂಕೋಲಾದ ಮಳಲಗಾವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರೀ ರಮೇಶ ಕೇಶವ ಹೆಗಡೆ, ಕುಮಟಾದ ನೆಹರುನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ಶೈಲಾ ದಿನಕರ ನಾಯ್ಕ, ಹೊನ್ನಾವರದ ಖಂಡೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಲಕ್ಷ್ಮಣ ಮಂಜುನಾಥ ಪಟಗಾರ ಹಾಗೂ ಭಟ್ಕಳದ ಬಬ್ಬನಕಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರೀ ಯಶವಂತ ಆರ್. ನಾಯ್ಕ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರದ ಕೋಡಿಬಾಗ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಕನ್ನಡ ಶಾಲೆಯ ಶ್ರೀಮತಿ ಶೋಭಾ ಆರ್. ಕಾಮತ, ಅಂಕೋಲಾದ ಗುಂಡಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ಶೋಭಾ ಸಣ್ಣಪ್ಪ ನಾಯಕ, ಕುಮಟಾದ ಗುಡಿಗಾರಗಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ರಾಮಚಂದ್ರ ಸುಬ್ರಾಯ ಶೆಟ್ಟಿ, ಹೊನ್ನಾವರದ ಸಂಶಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಸಾಲ್ವದೋರ್ ಮಿಂಗ್ಲಿ ಲೋಪಿಸ್ ಹಾಗೂ ಭಟ್ಕಳದ ಮಡಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ಮಾದೇವಿ ಟಿ. ಹರಿಕಾಂತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಕಾರವಾರದ ಅಸ್ಪೋಟಿಯ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆಯ ಶ್ರೀ ಸಂತೋಷ ಭರಮಾಣಿ ಕಾಂಬಳೆ, ಅಂಕೋಲಾದ ಅವರ್ಸಾದ ಶ್ರೀ ಕಾತ್ಯಾಯಿನಿ ಹೈಸ್ಕೂಲ್‌ನ ಶ್ರೀ ವಿನಾಯಕ ನಾಯಕ, ಕುಮಟಾದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನ ಶ್ರೀ ರಾಮಕೃಷ್ಣ ಎನ್. ನಾಯಕ, ಹೊನ್ನಾವರದ ಚಿತ್ತಾರ ಸರಕಾರಿ ಪ್ರೌಢಶಾಲೆಯ ಶ್ರೀಮತಿ ಭಾರತಿ ಆನಂದು ಶಾನಭಾಗ ಹಾಗೂ ಭಟ್ಕಳದ ಬೆಳಕೆ ಸರಕಾರಿ ಪ್ರೌಢಶಾಲೆಯ ಶ್ರೀ ಪ್ರಕಾಶ ಮಾಧವ ಶಿರಾಲಿ ಆಯ್ಕೆಯಾಗಿದ್ದಾರೆ.
