
ಗಣೇಶ ವಿಸರ್ಜನೆಗೂ ಮುನ್ನ ಅಘನಾಶಿನಿ ನದಿ ದಡದ ಪ್ರದೇಶ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಮನವಿ
ಕುಮಟಾ: ತಾಲೂಕಿನ ಮಣಕಿ ಗ್ರಾಮದ ಅಘನಾಶಿನಿ ನದಿ ದಡದಲ್ಲಿರುವ ಮಣಕಿ ದಕ್ಕೆ ಪ್ರದೇಶದಲ್ಲಿ ಮರ ಕಡಿತಗೊಂಡ ಬಳಿಕ ಉಳಿದಿರುವ ಮರದ ದಿಮ್ಮಿ, ಕೊಂಬೆಗಳು ಹಾಗೂ ಇನ್ನಿತರ ವಸ್ತುಗಳನ್ನು ಕೂಡಲೇ ತೆರವುಗೊಳಿಸಿ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಣಕಿ ದಕ್ಕೆ ಪ್ರದೇಶದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವುದರಿಂದ ಗಣೇಶ ಚತುರ್ಥಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಆದರೆ ದಕ್ಕೆ ಪ್ರದೇಶದಲ್ಲಿ ಮರದ ದಿಮ್ಮಿ ಹಾಗೂ ಇತರ ಅವಶೇಷಗಳು ಬಿದ್ದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ.
ಹೀಗಾಗಿ ಗಣೇಶ ವಿಸರ್ಜನೆಗೂ ಮುನ್ನ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮರದ ದಿಮ್ಮಿ, ಕೊಂಬೆಗಳು ಸೇರಿದಂತೆ ಅನಗತ್ಯ ವಸ್ತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ದಕ್ಕೆ ಪ್ರದೇಶವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
