UK Express Logo

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ: 18 ಶಿಕ್ಷಕರ ಆಯ್ಕೆ

By UKExpress on 9/9/2026

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ 2026-27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ವಿವಿಧ ತಾಲೂಕುಗಳ 18 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಾರ್ಯಾಲಯದಿಂದ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಆರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿರಸಿ ತಾಲೂಕಿನ ಅರುಣ ಭಟ್ಟ, ಸಿದ್ದಾಪುರದ ಪ್ರೇಮಾ ನಾಯ್ಕ, ಯಲ್ಲಾಪುರದ ಮಾರುತಿ ಆಚಾರಿ, ಮುಂಡಗೋಡದ ಗಣೇಶ ಸುಬ್ರಾಯ ಆಚಾರಿ, ಹಳಿಯಾಳದ ಸುಜಾತಾ ಎ.ಆರ್. ಹಾಗೂ ಜೋಯಿಡಾದ ಈರಣ್ಣ ಪಗಡಿ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿರಸಿಯ ಮಹಾದೇವ ಸಂಭಾಜಿ, ಸಿದ್ದಾಪುರದ ಗಣಪತಿ ಗೊಂಡ, ಯಲ್ಲಾಪುರದ ಸತೀಶ ಶೆಟ್ಟಿ, ಮುಂಡಗೋಡದ ಪುಷ್ಪಲತಾ ಗೋವಿಂದರಾಯ ನಾಯಕ್, ಹಳಿಯಾಳದ ಬೇಬಿ ದೊಡ್ಡ ಬೋರಕರ್ ಹಾಗೂ ಜೋಯಿಡಾದ ವಿದ್ಯಾ ಸೀತಾರಾಮ ದೇಸಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಶಿರಸಿಯ ದಿವಾಕರ ಮರಾಠಿ, ಸಿದ್ದಾಪುರದ ಪ್ರವೀಣ ಕುರುಬರ್, ಯಲ್ಲಾಪುರದ ನಾಗರಾಜ ಟಿ. ನಾಯ್ಕ, ಮುಂಡಗೋಡದ ರಮೇಶ ಪವಾರ್, ಹಳಿಯಾಳದ ಅರುಣ ಬೊಮ್ಮಯ್ಯ ನಾಯಕ್ ಹಾಗೂ ಜೋಯಿಡಾದ ಬಾಬು ತಾರಾಸಿಂಗ್ ಚವಾಣ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ, ಬೋಧನಾ ಕಾರ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿನ ಸಾಧನೆಯನ್ನು ಪರಿಗಣಿಸಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 18 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಆಯ್ಕೆಯಾದ ಶಿಕ್ಷಕರಿಗೆ ಶಿಕ್ಷಣ ಇಲಾಖೆ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ.