
ಕುಮಟಾ: ಹೆಗಡೆಯ ಶಾಂತಿಕಾಂಭ ಕ್ರೀಡಾಂಗಣದಲ್ಲಿ ಸೆ.10ರಂದು ನಡೆದ 2026-27ನೇ ಸಾಲಿನ 14 ವರ್ಷ ವಯೋಮಿತಿಯ ಮಕ್ಕಳ ವಲಯ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ದಿವಗಿಯ ಡಿ.ಜೆ.ವಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಕ್ರ ಎಸೆತದಲ್ಲಿ ಮಹೇಶ ಗೌಡ, ಎತ್ತರ ಜಿಗಿತದಲ್ಲಿ ಜೀವನ ಗೌಡ, ಚೆಸ್‌ನಲ್ಲಿ ನಾಗೇಂದ್ರ ಅಂಬಿಗ, 100 ಮೀ. ಓಟ ಹಾಗೂ ಉದ್ದ ಜಿಗಿತದಲ್ಲಿ ಶ್ರೀನಿಧಿ ಎಸ್. ಅಂಬಿಗ, ಗುಂಡು ಎಸೆತದಲ್ಲಿ ತಾರಾ ಗೌಡ ಹಾಗೂ ಎತ್ತರ ಜಿಗಿತದಲ್ಲಿ ಮನೀಷಾ ಗೌಡ ಪ್ರಥಮ ಸ್ಥಾನ ಪಡೆದಿದ್ದಾರೆ. ಚೆಸ್‌ನಲ್ಲಿ ಲಾವ್ಯ ದೇಶಭಂಡಾರಿ ಕೂಡ ಪ್ರಥಮ ಸ್ಥಾನ ಗಳಿಸಿದ್ದಾರೆ.
100 ಮೀ. ಓಟದಲ್ಲಿ ಭರತ ಗೌಡ, 200 ಮೀ. ಓಟದಲ್ಲಿ ನಿತೀನ್ ಅಂಬಿಗ, ಗುಂಡು ಎಸೆತದಲ್ಲಿ ಮಹೇಶ ಗೌಡ, ಉದ್ದ ಜಿಗಿತದಲ್ಲಿ ನಿತೀನ್ ಅಂಬಿಗ, ಚೆಸ್‌ನಲ್ಲಿ ನಿತೇಶ್ ದೇಶಭಂಡಾರಿ, 100 ಮೀ. ಹಾಗೂ 200 ಮೀ. ಓಟದಲ್ಲಿ ಲಾವಣ್ಯ ಗೌಡ ಮತ್ತು ಗುಂಡು ಎಸೆತದಲ್ಲಿ ರೋಶಿನಿ ಮುಕ್ರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಉದ್ದ ಜಿಗಿತದಲ್ಲಿ ಭರತ ಗೌಡ ಹಾಗೂ ಲಾವಣ್ಯ ಗೌಡ ತೃತೀಯ ಸ್ಥಾನ ಗಳಿಸಿದ್ದಾರೆ.
ತಂಡ ವಿಭಾಗದಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಗಂಡು ಮಕ್ಕಳ ಕಬಡ್ಡಿಯಲ್ಲಿ ಪ್ರಥಮ, ಹೆಣ್ಣು ಮಕ್ಕಳ ರೀಲೆಯಲ್ಲಿ ಪ್ರಥಮ, ಗಂಡು ಮಕ್ಕಳ ರೀಲೆಯಲ್ಲಿ ದ್ವಿತೀಯ ಹಾಗೂ ಹೆಣ್ಣು ಮಕ್ಕಳ ಕಬಡ್ಡಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಹೆಣ್ಣು ಮಕ್ಕಳ ವೈಯಕ್ತಿಕ ವಿಭಾಗದಲ್ಲಿ ಕು. ಶ್ರೀನಿಧಿ ಶ್ರೀಕಾಂತ ಅಂಬಿಗ ಅವರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 23 ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆಯುವುದರೊಂದಿಗೆ ವೈಯಕ್ತಿಕ ವಿಭಾಗದ ವೀರಾಗ್ರಣಿ ಪ್ರಶಸ್ತಿ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಡಿ.ಜೆ.ವಿ.ಎಸ್. ವಿದ್ಯಾಸಂಸ್ಥೆಯ ಅಧ್ಯಕ್ಷ ದಿನಕರ ಶೆಟ್ಟಿ, ಕಾರ್ಯಾಧ್ಯಕ್ಷ ಮುಕುಂದ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಲಚಂದ್ರ ಗೌಡ ಹಾಗೂ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ.
