UK Express Logo
BREAKING

ಕತಗಾಲದಲ್ಲಿ ನ.15ರಂದು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ

By UKExpress on 11/12/2026

ಕುಮಟಾ: ಬೆಳಕು ನೇತ್ರಾಲಯ, ಕುಮಟಾ ಹಾಗೂ ಗಜು ಪೈ ಅಭಿಮಾನಿ ಬಳಗ ಮತ್ತು ಯುಗಾದಿ ಉತ್ಸವ ಸಮಿತಿ, ಕತಗಾಲ ಇವರ ಸಹಕಾರದೊಂದಿಗೆ ನವೆಂಬರ್ 15ರಂದು ಕತಗಾಲದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕತಗಾಲದ ಸಹಕಾರಿ ಸಂಘದ ಸೊಸೈಟಿ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ. ನೇತ್ರ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಮಲ್ಲಿಕಾರ್ಜುನ ಸಿ.ಎಸ್. (MBBS, MS (OPH), FGO) ಅವರು ಶಿಬಿರದಲ್ಲಿ ನೇತ್ರ ತಪಾಸಣೆ ನಡೆಸಲಿದ್ದಾರೆ.

ಶಿಬಿರದಲ್ಲಿ ಕಣ್ಣಿನ ಪೊರೆ, ಗ್ಲಾಕೋಮಾ, ಕಾರ್ನಿಯಾ ಸಮಸ್ಯೆಗಳು, ಮಕ್ಕಳ ನೇತ್ರ ಸಮಸ್ಯೆಗಳು, ನರ ನೇತ್ರಶಾಸ್ತ್ರ, ಮೆಳ್ಳಗಣ್ಣು, ಕಡಿಮೆ ದೃಷ್ಟಿ ಸಮಸ್ಯೆಗಳು ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗಳಿಗೆ ಸಂಬಂಧಿಸಿದ ತಪಾಸಣೆ ಹಾಗೂ ಚಿಕಿತ್ಸಾ ಸಲಹೆ ನೀಡಲಾಗುತ್ತದೆ. ಕನ್ನಡಕ ಮುಕ್ತ ಜೀವನಕ್ಕಾಗಿ ಲಸಿಕ್ ಚಿಕಿತ್ಸೆಯ ಕುರಿತೂ ಮಾಹಿತಿ ಲಭ್ಯವಿರಲಿದೆ.

ಯಶಸ್ವಿನಿ, ಸಂಪೂರ್ಣ ಸುರಕ್ಷಾ ಸೇರಿದಂತೆ ವಿವಿಧ ವಿಮಾ ಯೋಜನೆಗಳು ಹಾಗೂ ಖಾಸಗಿ ವಿಮೆಗಳ ಸೌಲಭ್ಯವೂ ಲಭ್ಯವಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಶಿಬಿರಕ್ಕೆ ಆಗಮಿಸುವವರು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ತರಬೇಕು. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಕುರಿತು ಮಾಹಿತಿ ನೀಡಲಾಗುವುದು. ಮಧುಮೇಹ ಹಾಗೂ ರಕ್ತದೊತ್ತಡ ಇರುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 6363732149, 8762972017, 9449749278 ಸಂಪರ್ಕಿಸಬಹುದು.