UK Express Logo

ಭಟ್ಕಳ ಎಎಸ್‌ಪಿ ಆಗಿ ಐಪಿಎಸ್ ಅಧಿಕಾರಿ ರಾಣು ಗುಪ್ತ ನೇಮಕ

By UKExpress on 9/9/2026

ಭಟ್ಕಳ: ಭಟ್ಕಳ ಉಪವಿಭಾಗದ ನೂತನ ಎಎಸ್‌ಪಿಯಾಗಿ 2024ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ರಾಣು ಗುಪ್ತ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬಿಹಾರ ಮೂಲದ ರಾಣು ಗುಪ್ತ ಅವರು 2024ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕಳೆದ ಡಿಸೆಂಬರ್ 29ರಿಂದ ತುಮಕೂರು ಜಿಲ್ಲೆಯಲ್ಲಿ ಪ್ರೊಬೆಷನರಿ ತರಬೇತಿ (ಡಿಪಿಟಿ) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೀಗ ಅವರನ್ನು ಭಟ್ಕಳ ಉಪವಿಭಾಗದ ಎಎಸ್‌ಪಿಯಾಗಿ ನಿಯೋಜಿಸಲಾಗಿದೆ.

ಈ ಹಿಂದೆ ಭಟ್ಕಳ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಅವರು ಬೆಂಗಳೂರು ಡಿಜಿ ಕಚೇರಿಗೆ ರಿಪೋರ್ಟಿಂಗ್ ಆಗಿದ್ದಾರೆ ಎನ್ನಲಾಗಿದೆ.