UK Express Logo

ಬಳ್ಕೂರಿನಲ್ಲಿ ಅಂಚೆ ಗ್ರಾಹಕರ ಸೇವಾ ಕೇಂದ್ರ ಉದ್ಘಾಟನೆ

By UKExpress on 9/9/2026

ಹೊನ್ನಾವರ: ಅಂಚೆ ಇಲಾಖೆಯ ವಿವಿಧ ಸೇವೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಒದಗಿಸುವ ಉದ್ದೇಶದಿಂದ ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮದಲ್ಲಿ ಅಂಚೆ ಗ್ರಾಹಕರ ಸೇವಾ ಕೇಂದ್ರವನ್ನು ಮಂಗಳವಾರ ಆರಂಭಿಸಲಾಯಿತು.

ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಅವರು ಅಂಚೆ ಗ್ರಾಹಕರ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರಿಗೆ ಅಂಚೆ ಇಲಾಖೆಯ ಸೇವೆಗಳು ಇನ್ನಷ್ಟು ಸುಲಭವಾಗಿ ಹಾಗೂ ತ್ವರಿತವಾಗಿ ದೊರೆಯಲು ಇಂತಹ ಕೇಂದ್ರಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಅಲ್ಲದೇ, ಯುವಕರು ಸ್ವಯಂ ಉದ್ಯೋಗ ಆರಂಭಿಸಲು ಅಂಚೆ ಗ್ರಾಹಕರ ಸೇವಾ ಕೇಂದ್ರದ ಯೋಜನೆ ಉತ್ತಮ ಅವಕಾಶವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳ್ಕೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉದಯಕುಮಾರ್ ಬಾಂದೇಕರ್, ಗ್ರಾಮ ಆಡಳಿತ ಅಧಿಕಾರಿ ಸಾತವಾಡಿ ವಸಂತ ಕುಮಾರ್, ಮಾಜಿ ಸದಸ್ಯ ಮಾರುತಿ ಗಿಡ್ಡ ನಾಯ್ಕ್, ಹೊನ್ನಾವರ ಉಪ ವಿಭಾಗದ ಅಂಚೆ ನಿರೀಕ್ಷಕ ಶಂಕರ್ ಲಮಾಣಿ, ಕಾರವಾರ ವಿಭಾಗದ ಮಾರುಕಟ್ಟೆ ನಿರ್ವಾಹಕ ರಾಘವೇಂದ್ರ ಆಚಾರ್ಯ, ಹೊನ್ನಾವರ ಉಪ ವಿಭಾಗದ ಮಾರುಕಟ್ಟೆ ನಿರ್ವಾಹಕ ಪ್ರಸನ್ನ ಹೇರೂರು, ಮೇಲ್ವಿಚಾರಕರಾದ ಎಂ.ಐ. ನಾಯ್ಕ್, ಅಂಚೆ ಫ್ರಾಂಚೈಸಿ ಮಾಲಿಕ ವಿನಾಯಕ ಮಡಿವಾಳ, ಊರಿನ ನಾಗರಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.