UK Express Logo

ಅಂಕೋಲಾದಲ್ಲಿ ಸೆ.2ರಂದು, ಸಿದ್ದಾಪುರದಲ್ಲಿ ಸೆ.3ರಂದು ವಿದ್ಯುತ್ ವ್ಯತ್ಯಯ

By UKExpress on 9/9/2026

ಕಾರವಾರ: ಅಂಕೋಲಾ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ವಿದ್ಯುತ್ ನಿರ್ವಹಣೆ ಮತ್ತು ತುರ್ತು ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.

ಅಂಕೋಲಾ: ಅಂಕೋಲಾ ಉಪವಿಭಾಗದ 33/11 ಕೆ.ವಿ. ಉಪವಿದ್ಯುತ್ ವಿತರಣಾ ಕೇಂದ್ರ ಅಂಕೋಲಾ, 33/11 ಕೆ.ವಿ. ಉಪವಿದ್ಯುತ್ ವಿತರಣಾ ಕೇಂದ್ರ ಮಾಸ್ತಿಕಟ್ಟಾ ಹಾಗೂ 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಬಾಳೆಗುಳಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸೆ.2ರಂದು ಬುಧವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ 33 ಕೆ.ವಿ. ಅಂಕೋಲಾ, 33 ಕೆ.ವಿ. ಸೀಬರ್ಡ್, ವಜ್ರಕೋಶ ಹಾಗೂ 11 ಕೆ.ವಿ. ಬೇಲೆಕೇರಿ, ಅಗಸೂರು, ನವಗದ್ದೆ, ವೊಡಾಪೋನ್, ಶಿರಗುಂಜಿ, ಹೊನ್ನಳ್ಳಿ, ಮಾಸ್ತಿಕಟ್ಟಾ, ರಾಮನಗುಳಿ, ಹಡಿನಗದ್ದೆ, ಹಳವಳ್ಳಿ, ಅಂಕೋಲಾ, ಅಂಬಾರಕೊಡ್ಲ, ಗುಂಡಬಾಳ, ವಂದಿಗೆ ಹಾಗೂ ಅಗ್ರಗೋಣ ಫೀಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಸಿದ್ದಾಪುರ: ಸಿದ್ದಾಪುರದ 110/11 ಕೆ.ವಿ. ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೆ.3ರಂದು ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಿದ್ದಾಪುರ ತಾಲೂಕಿನಾದ್ಯಂತ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ತುರ್ತು ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ವಿದ್ಯುತ್ ನಿಲುಗಡೆ ಅನಿವಾರ್ಯವಾಗಿರುವುದರಿಂದ ಅಂಕೋಲಾ ಹಾಗೂ ಸಿದ್ದಾಪುರ ತಾಲೂಕಿನ ವಿದ್ಯುತ್ ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಮನವಿ ಮಾಡಿದ್ದಾರೆ.