ಶಿರಸಿ: ನಗರದ ಖ್ಯಾತ ಛಾಯಾಗ್ರಾಹಕ ಹಾಗೂ ಹತ್ತಾರು ತಾಲೂಕುಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದ 'ಶ್ರೀರಾಜ್ ಫೋಟೋ ಸ್ಟುಡಿಯೋ' ಮಾಲೀಕ ರಾಜಾರಾಮ ಹೆಗಡೆ (72) ಅವರು ನಿಧನರಾಗಿದ್ದಾರೆ.
ಮೂಲತಃ ಶಿರಸಿ ತಾಲೂಕಿನ ಮುಂಡಗೆತೋಟದವರಾದ ಅವರು, ಪ್ರಸ್ತುತ ಮರಾಠಿಕೊಪ್ಪದಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ಅಪಾರ ಅನುಭವ ಹೊಂದಿದ್ದ ಅವರು 1980ರಲ್ಲಿ ಶಿರಸಿಯ ಉಣ್ಣೆಮಠಗಲ್ಲಿ ರಸ್ತೆಯಲ್ಲಿ 'ಶ್ರೀರಾಜ್ ಫೋಟೋ ಸ್ಟುಡಿಯೋ' ಹಾಗೂ 1996ರಲ್ಲಿ 'ಕಲರ್ ಲ್ಯಾಬ್' ಅನ್ನು ಆರಂಭಿಸಿದ್ದರು. ತಮ್ಮ ಅತ್ಯುತ್ತಮ ಗುಣಮಟ್ಟದ ಛಾಯಾಗ್ರಹಣದ ಮೂಲಕ ಶಿರಸಿ ಮತ್ತು ಸುತ್ತಮುತ್ತಲಿನ ಹತ್ತಾರು ತಾಲೂಕುಗಳಲ್ಲಿ ಏಕಮೇವಾದ್ವಿತೀಯ ಫೋಟೋಗ್ರಾಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮೃ, ತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಇಬ್ಬರೂ ಮಕ್ಕಳು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹೀಗಾಗಿ ಅವರು ಊರಿಗೆ ಮರಳಿದ ಬಳಿಕ, ಮಾರ್ಚ್ 22ರ ಭಾನುವಾರದಂದು ಶಿರಸಿಯ 'ನೆಮ್ಮದಿ ರುದ್ರಭೂಮಿ'ಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಾವಿರಾರು ಜನರ ನೆನಪುಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದ ರಾಜಾರಾಮ ಹೆಗಡೆ ಅವರ ನಿಧನಕ್ಕೆ ಶಿರಸಿಯ ಗಣ್ಯರು, ಗ್ರಾಹಕರು ಹಾಗೂ ಸ್ಥಳೀಯ ಛಾಯಾಗ್ರಾಹಕರ ವಲಯ ತೀವ್ರ ಸಂತಾಪ ಸೂಚಿಸಿದೆ.

