UK Express Logo

ಬೆಳ್ಳಂಬೆಳಗ್ಗೆ ಅತಿಕ್ರಮಣಕಾರರಿಗೆ ಶಾಕ್ ನೀಡಿದ ಕಾರವಾರ ನಗರಸಭೆ ಅಧಿಕಾರಿಗಳು

By UKExpress on 3/19/2026
Featured Image ಕಾರವಾರ: ಸಾರ್ವಜನಿಕ ಸಂಚಾರಕ್ಕೆ ಸಂಚಕಾರವಾಗಿದ್ದ ರಸ್ತೆ ಅತಿಕ್ರಮಣಗಳ ವಿರುದ್ಧ ಕಾರವಾರ ನಗರಸಭೆ ಬುಧವಾರ ಬೆಳ್ಳಂಬೆಳಗ್ಗೆ ಸಮರ ಸಾರಿದೆ. ‘ಆಪರೇಷನ್ ಕ್ಲೀನ್ ಕಾರವಾರ’ ಹೆಸರಿನಲ್ಲಿ ನಡೆದ ಈ ದಿಢೀರ್ ಕಾರ್ಯಾಚರಣೆಯಲ್ಲಿ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. 20260319 144054 ನಗರದ ಅತ್ಯಂತ ಜನನಿಬಿಡ ಪ್ರದೇಶಗಳಾದ ಎಂ.ಜಿ. ರಸ್ತೆ ಮತ್ತು ಪಿಕಳೆ ರಸ್ತೆಗಳಲ್ಲಿ ಈ ಕಾರ್ಯಾಚರಣೆ ಪ್ರಮುಖವಾಗಿ ನಡೆಯಿತು. ಇಲ್ಲಿನ ಫುಟ್‌ಪಾತ್ ಹಾಗೂ ಪಾರ್ಕಿಂಗ್ ಜಾಗಗಳನ್ನು ಅತಿಕ್ರಮಿಸಿ ಗೂಡಂಗಡಿಗಳನ್ನು ಸ್ಥಾಪಿಸಲಾಗಿತ್ತು. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿತ್ತು. ಸಾರ್ವಜನಿಕರಿಂದ ಬಂದ ಸಾಲು ಸಾಲು ದೂರುಗಳ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ರಸ್ತೆ ಅತಿಕ್ರಮಿಸಿ ಇಟ್ಟಿದ್ದ ಫ್ರಿಡ್ಜ್‌ಗಳು ಸೇರಿದಂತೆ ವಿವಿಧ ಅಂಗಡಿ ಸಾಮಗ್ರಿಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸಿ, ನಗರಸಭೆ ವಾಹನಗಳಲ್ಲಿ ಜಪ್ತಿ ಮಾಡಲಾಯಿತು. ವ್ಯಾಪಾರಿಗಳಿಂದ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆ ಇದ್ದಿದ್ದರಿಂದ, ಅಧಿಕಾರಿಗಳು ಮುಂಜಾನೆಯೇ ಕಾರ್ಯಾಚರಣೆ ಆರಂಭಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಸಭೆ ಸಿಬ್ಬಂದಿ ಬಿಗಿ ಬಂದೋಬಸ್ತ್ ನಡುವೆ ಅತಿಕ್ರಮಣ ಮುಕ್ತಗೊಳಿಸಿದರು. 20260319 144054