UK Express Logo

ಭಟ್ಕಳ ಉಪವಿಭಾಗದ ನೂತನ ಎಎಸ್‌ಪಿಯಾಗಿ ರಾನು ಗುಪ್ತ ಅಧಿಕಾರ ಸ್ವೀಕಾರ

By UKExpress on 9/9/2026

ಭಟ್ಕಳ: ಕರ್ನಾಟಕ ಕೇಡರ್‌ನ 2024ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ರಾನು ಗುಪ್ತ ಅವರು ಭಟ್ಕಳ ಉಪವಿಭಾಗದ ನೂತನ ಸಹಾಯಕ ಪೊಲೀಸ್‌ ಅಧೀಕ್ಷಕರಾಗಿ (ASP) ಅಧಿಕಾರ ಸ್ವೀಕರಿಸಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಭಟ್ಕಳಕ್ಕೆ ಆಗಮಿಸಿದ ಅವರು ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ವಹಿಸಿಕೊಂಡರು. ಬಿಹಾರ ಮೂಲದ ರಾನು ಗುಪ್ತ ಅವರು ಪೊಲೀಸ್‌ ಸೇವೆಯ ಆರಂಭಿಕ ಹಂತದಲ್ಲಿದ್ದು, ಇದಕ್ಕೂ ಮೊದಲು ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪ್ರೊಬೇಷನರಿ ತರಬೇತಿ (DPT) ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ ಹಾಗೂ ಪೊಲೀಸ್‌ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವುದು ನೂತನ ಎಎಸ್‌ಪಿ ಅವರ ಪ್ರಮುಖ ಜವಾಬ್ದಾರಿಗಳಾಗಿವೆ.

ಇದೇ ವೇಳೆ ಈ ಹಿಂದೆ ಭಟ್ಕಳ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್ ಅವರು ಬೆಂಗಳೂರು ಡಿಜಿ ಕಚೇರಿಗೆ ವರ್ಗಾವಣೆ ಆಗಿದ್ದಾರೆ ಎಂದು ತಿಳಿದುಬಂದಿದೆ.

ನೂತನ ಎಎಸ್‌ಪಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಉಪವಿಭಾಗದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.