UK Express Logo

ಶಿರಸಿಯಲ್ಲಿ ಸೆ.3ರಂದು ವಿದ್ಯುತ್ ವ್ಯತ್ಯಯ

By UKExpress on 9/9/2026

ಶಿರಸಿ: ಶಿರಸಿ 110/11 ಕೆ.ವಿ. ಉಪಕೇಂದ್ರದಲ್ಲಿ ಬನವಾಸಿ, ಸುಗಾವಿ ಹಾಗೂ ತಾರಗೋಡ ಫೀಡರ್‌ಗಳ ಜಿ.ಓ.ಎಸ್. ಬದಲಾವಣೆ ಕಾಮಗಾರಿ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.3ರಂದು ಗುರುವಾರ ಶಿರಸಿ ನಗರದಾದ್ಯಂತ ಹಾಗೂ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಶಿರಸಿ 110/11 ಕೆ.ವಿ. ಉಪಕೇಂದ್ರದಿಂದ ಹೊರಡುವ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖಂಡ ಹಾಗೂ ತಾರಗೋಡ ಮಾರ್ಗಗಳ ವ್ಯಾಪ್ತಿಯಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.

ಕಾಮಗಾರಿ ನಿಗದಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ, ಅದಕ್ಕೂ ಮೊದಲೇ ವಿದ್ಯುತ್ ಸರಬರಾಜು ಪುನರಾರಂಭಿಸಲಾಗುವುದು. ಕಾಮಗಾರಿ ಅವಧಿಯಲ್ಲಿ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಶಿರಸಿ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.