UK Express Logo

ನೌಕಾಪಡೆಯ ಸೇಲರ್ ನಾಪತ್ತೆ: ಪತ್ತೆಗೆ ಕಾರವಾರ ಗ್ರಾಮೀಣ ಪೊಲೀಸರ ಮನವಿ

By UKExpress on 9/9/2026

ಕಾರವಾರ: ಇಂಡಿಯನ್ ನೇವಿಯಲ್ಲಿ ಸೇಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುರುಬಾ ದಿನೇಶ ಕುಮಾರ (28) ಎಂಬವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಮನವಿ ಮಾಡಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಮಗಿರಿ, ಕುಂಟಿಮಡ್ಡಿ, ಬಿ.ಸಿ. ಕಾಲೋನಿ ನಿವಾಸಿಯಾಗಿರುವ ದಿನೇಶ ಕುಮಾರ ಅವರು ಆಗಸ್ಟ್ 27ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರವಾರದ ನೇವಲ್ ಬೇಸ್ ಅರ್ಗಾದಿಂದ ತೆರಳಿದ ಬಳಿಕ ಕಾಣೆಯಾಗಿದ್ದಾರೆ. ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ದಿನೇಶ ಕುಮಾರ ಅವರು ಸಾರ್ವಜನಿಕರಿಗೆ ಕಂಡುಬಂದಲ್ಲಿ ಅಥವಾ ಅವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08382-222443ಕ್ಕೆ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.