UK Express Logo

ಕಾರವಾರದ ರಿತೇಶ್ ಭಟ್ಕಳ್ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆ

By UKExpress on 10/2/2026

ಕಾರವಾರ: ಕಾರವಾರದ ಪ್ರತಿಭಾವಂತ ಕ್ರಿಕೆಟಿಗ ರಿತೇಶ್ ಭಟ್ಕಳ್ ಅವರು 2026–27ನೇ ಸಾಲಿನ ಕರ್ನಾಟಕದ ಪ್ರತಿಷ್ಠಿತ ರಣಜಿ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಯ ಮೂಲಕ ರಿತೇಶ್ ಅವರು ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದ ರಿತೇಶ್, ಕಾರವಾರದ St. Joseph’s Schoolನಲ್ಲಿ ಶಿಕ್ಷಣ ಪಡೆದು ಬಳಿಕ Hindu High Schoolನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಕಾರವಾರದ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ಅವರು, ನಿರಂತರ ಪರಿಶ್ರಮ, ಶಿಸ್ತು ಮತ್ತು ಕ್ರೀಡಾ ಸಮರ್ಪಣೆಯ ಮೂಲಕ ಇದೀಗ ರಾಜ್ಯ ಮಟ್ಟದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ರಿತೇಶ್ ಅವರ ಕ್ರಿಕೆಟ್ ಪಯಣದಲ್ಲಿ ಕುಟುಂಬದ ಪ್ರೋತ್ಸಾಹವೂ ಪ್ರಮುಖ ಪಾತ್ರ ವಹಿಸಿದೆ. ಅವರ ತಂದೆಯವರು ಕಾರವಾರದ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಾರವಾರದ ಸ್ಥಳೀಯ ಮೈದಾನಗಳಿಂದ ಕರ್ನಾಟಕದ ರಣಜಿ ತಂಡದವರೆಗೆ ರಿತೇಶ್ ಭಟ್ಕಳ್ ಅವರ ಪಯಣ ಯುವ ಕ್ರಿಕೆಟಿಗರಿಗೆ ಸ್ಫೂರ್ತಿದಾಯಕವಾಗಿದೆ. ಅವರ ಈ ಸಾಧನೆಗೆ ಕುಟುಂಬಸ್ಥರು, ಗುರುಗಳು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ರಣಜಿ ಟ್ರೋಫಿ 2026–27ರ ಪಯಣಕ್ಕೆ ರಿತೇಶ್ ಭಟ್ಕಳ್ ಅವರಿಗೆ ಹಾರ್ದಿಕ ಶುಭಾಶಯಗಳು.