UK Express Logo

ಕಾರವಾರ, ಕುಮಟಾ, ದಾಂಡೇಲಿಯಲ್ಲಿ ಪೊಲೀಸ್‌ ಅಧಿಕಾರಿಗಳ ಬದಲಾವಣೆ

By UKExpress on 10/2/2026

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಗೆ ಸಂಬಂಧಿಸಿದಂತೆ ಆದೇಶ ಹೊರಬಿದ್ದಿದೆ. ಕಾರವಾರ, ಕುಮಟಾ, ದಾಂಡೇಲಿ ಸೇರಿದಂತೆ ವಿವಿಧ ಪೊಲೀಸ್‌ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ಕಾರವಾರ ಡಿವೈಎಸ್‌ಪಿ ಆಗಿದ್ದ ಗಿರೀಶ್ ಅವರನ್ನು ಕರಾವಳಿ ಕಾವಲುಪಡೆ, ಉಡುಪಿಗೆ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಡಿಸಿಆರ್‌ಇಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಸ್. ಲೋಕಾಪುರ ಅವರನ್ನು ಕಾರವಾರ ಡಿವೈಎಸ್‌ಪಿ ಆಗಿ ನೇಮಕ ಮಾಡಲಾಗಿದೆ.

ಈ ಹಿಂದೆ ಭಟ್ಕಳ ಡಿವೈಎಸ್‌ಪಿ ಆಗಿದ್ದ ಗಿರೀಶ್ ಬಿ. ಅವರನ್ನು ಡಿಸಿಆರ್‌ಇಯಿಂದ ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಇನ್ನು ಕುಮಟಾ ಪೊಲೀಸ್‌ ಠಾಣೆಯ ಪಿಐ ಯೋಗೇಶ್ ಕೆ.ಎಂ. ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಕುಸುಮಾಧರ್ ಕೆ. ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಅದೇ ರೀತಿ ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆಯ ಪಿಐ ಉಳಿವೆಪ್ಪ ಹೆಚ್. ಸಾತೇನಹಳ್ಳಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಧಾರವಾಡ ಪೊಲೀಸ್‌ ತರಬೇತಿ ಶಾಲೆಯ ರಮೇಶ್ ಬಸಪ್ಪ ಗೋಕಾಕ್ ಅವರನ್ನು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಈ ವರ್ಗಾವಣೆ ಹಾಗೂ ನಿಯೋಜನೆಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್‌ ಇಲಾಖೆಯ ಹಲವು ಪ್ರಮುಖ ಹುದ್ದೆಗಳಲ್ಲಿ ಬದಲಾವಣೆಗಳು ಆಗಿವೆ.