UK Express Logo

ಹೆಗಡೆ ರೈಲ್ವೆ ಗೇಟ್ ಸೆ.10ರಂದು 3 ಗಂಟೆ ಬಂದ್

By UKExpress on 9/9/2026

ಕುಮಟಾ: ರೈಲ್ವೆ ಹಳಿ ಹಾಗೂ ಕ್ರಾಸಿಂಗ್‌ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಗಡೆ ರೈಲ್ವೆ ಗೇಟ್‌ನ್ನು ಸೆ.10ರಂದು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

ಕೊಂಕಣ ರೈಲ್ವೆ ನಿಗಮದ ಪ್ರಕಟಣೆಯಂತೆ, ಹೆಗಡೆ ರೈಲ್ವೆ ಗೇಟ್ ಸಂಖ್ಯೆ L.C. 62 (ಕಿಮೀ 554/2-3) ಅನ್ನು ಸೆ.10ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ಬಂದ್ ಮಾಡಲಾಗುವುದು.

ಹೆಗಡೆ ರೈಲ್ವೆ ಕ್ರಾಸಿಂಗ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಕ್ರಾಸಿಂಗ್‌ನ ಬ್ಲಾಕ್‌ಗಳು ಕಿತ್ತುಹೋಗಿ, ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ. ಅಲ್ಲದೆ, ರೈಲ್ವೆ ಹಳಿಗಳ ಮೇಲೂ ಹೆಚ್ಚಿನ ಒತ್ತಡ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬ್ಲಾಕ್‌ಗಳನ್ನು ದುರಸ್ತಿ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲು ಗೇಟ್‌ನ್ನು ಬಂದ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಅವಧಿಯಲ್ಲಿ ಹೆಗಡೆ ಗ್ರಾಮದ ನಾಗರಿಕರು ಹಾಗೂ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಸಹಕರಿಸುವಂತೆ ಕೋರಲಾಗಿದೆ.