
ದಾಂಡೇಲಿ: 11 ಕೆ.ವಿ. ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.10ರಂದು ದಾಂಡೇಲಿ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸೆ.10ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ದಾಂಡೇಲಿ ನಗರದ ರೈಲು ನಿಲ್ದಾಣ, ಸರ್ಕಾರಿ ಪದವಿ ಕಾಲೇಜು, ವಿಟಿಯು, ನಿರ್ಮಲ ನಗರ, ಎಸ್‌ಆರ್‌ಟಿ, ಟಿಆರ್‌ಟಿ, ಶುಭಾಷ್‌ನಗರ, ಹಸನ್ಮಹಲ್, ಬಾಂಬೂ ಗೇಟ್, ಲಿಂಕ್ ರೋಡ್, ಹಳಿಯಾಳ ರಸ್ತೆ, ಅಲೈಡ್ ಏರಿಯಾ, ವಿನಾಯಕ ನಗರ ಹಾಗೂ ಗೇಟ್ ನಂ.3 ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದರೊಂದಿಗೆ ಗ್ರಾಮೀಣ ಪ್ರದೇಶಗಳಾದ ಅಂಬಿಕಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ನಿಗದಿತ ಸಮಯದಲ್ಲಿ ಗ್ರಾಹಕರು ಸಹಕರಿಸುವಂತೆ ದಾಂಡೇಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
