UK Express Logo

ಮುರುಡೇಶ್ವರದಲ್ಲಿ ಅಪ್ರಾಪ್ತನಿಂದ ವಾಹನ ಚಾಲನೆ: ₹25 ಸಾವಿರ ದಂಡ

By UKExpress on 10/1/2026

ಮುರುಡೇಶ್ವರ: ಪೊಲೀಸ್ ತಪಾಸಣೆ ವೇಳೆ ಅಪ್ರಾಪ್ತ ವಯಸ್ಕನೊಬ್ಬ ವಾಹನ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಪೊಲೀಸರು ವರದಿ ಸಲ್ಲಿಸಿದ್ದು, ವರದಿ ಆಧರಿಸಿ ಭಟ್ಕಳದ ಜೆಎಂಎಫ್‌ಸಿ ನ್ಯಾಯಾಲಯವು ₹25,000 ದಂಡ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ₹25,000 ದಂಡದ ಮೊತ್ತವನ್ನು ಪಾಲಕರು ನ್ಯಾಯಾಲಯಕ್ಕೆ ಪಾವತಿಸಿದ್ದಾರೆ.

ಪೊಲೀಸ್ ತಪಾಸಣೆ ನಡೆಸಿ ಪ್ರಕರಣ ದಾಖಲಿಸುವಲ್ಲಿ ಮುರುಡೇಶ್ವರ ಸಿ.ಪಿ.ಐ ಜಗದೀಶ ಹಂಚಿನಾಳ ಅವರು ಕ್ರಮ ಕೈಗೊಂಡಿದ್ದಾರೆ.

ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವುದು ಅಪಾಯಕಾರಿ ಮಾತ್ರವಲ್ಲದೆ ಕಾನೂನು ಕ್ರಮಕ್ಕೂ ಕಾರಣವಾಗಬಹುದು. ಪೋಷಕರು ಮಕ್ಕಳಿಗೆ ವಾಹನ ನೀಡದೆ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಬೇಕು. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬೇಡಿ ಎಂದು ಸಿ.ಪಿ.ಐ ಜಗದೀಶ ಅವರು ಪಾಲಕರಿಗೆ ಮನವಿ ಮಾಡಿದ್ದಾರೆ.