UK Express Logo

ಖೋ-ಖೋದಲ್ಲಿ ಸತತ 5ನೇ ಬಾರಿ ವಿಭಾಗ ಮಟ್ಟಕ್ಕೆ ಆಯ್ಕೆ; ವಿನುತಾ ಗೌಡ 3 ಕಿ.ಮೀ. ನಡಿಗೆಯಲ್ಲಿ ರಾಜ್ಯ ಮಟ್ಟಕ್ಕೆ

By UKExpress on 10/5/2026

ಕುಮಟಾ: ಭಟ್ಕಳದಲ್ಲಿ ನಡೆದ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾ ತಾಲೂಕಿನ ಊರಕೇರಿಯ ಎನ್.ಎಸ್.ಎಸ್. ಸೊಸೈಟಿ (ರಿ.) ಶ್ರೀರಾಮನಾಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಕ್ರೀಡಾ ಸಾಧನೆ ಮಾಡಿದ್ದಾರೆ.

ಹುಡುಗಿಯರ ಖೋ-ಖೋ ತಂಡವು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸತತ 5ನೇ ಬಾರಿಗೆ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ಮೂಲಕ ತಂಡವು ತನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ.

ಹುಡುಗರ ಖೋ-ಖೋ ವಿಭಾಗದಲ್ಲಿ ಸುನಿಲ್ ಅಣ್ಣಪ್ಪ ಗೌಡ, ಕೃಷ್ಣ ಟಿ. ಗೌಡ ಹಾಗೂ ಪವನ್ ರಾಮ ಗೌಡ ಅವರು ಉತ್ತಮ ಪ್ರದರ್ಶನ ನೀಡಿ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದೇ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿನಿ ವಿನುತಾ ಗೋಯ್ದು ಗೌಡ ಅವರು 3 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯು ಶಾಲೆಗೆ ಕೀರ್ತಿ ತಂದಿದ್ದು, ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಜಿ. ಭಟ್ಟ, ಮುಖ್ಯಾಧ್ಯಾಪಕರಾದ ಶ್ರೀಮತಿ ಸುಜಾತ ಎಚ್. ನಾಯ್ಕ, ಶಿಕ್ಷಕ ಸಿಬ್ಬಂದಿ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಜಂಗಾ ಎಚ್. ಗೌಡ ಅವರನ್ನೂ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿ ಅಭಿನಂದಿಸಿದ್ದಾರೆ.