UK Express Logo

ರಾಜ್ಯಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಕುಮಟಾ ಕೆಪಿಎಸ್ ಅಘನಾಶಿನಿ ಶಾಲೆಯ ವಿದ್ಯಾರ್ಥಿ ಆಯ್ಕೆ

By UKExpress on 10/4/2026

ಕುಮಟಾ: ತಾಲೂಕಿನ ಕೆಪಿಎಸ್ ಅಘನಾಶಿನಿ ಶಾಲೆಯ ವಿದ್ಯಾರ್ಥಿ ಕುಮಾರ ಚಿರಂಜೀವಿ ಸಂಜೀವ ನಾಯ್ಕ ಅವರು 17 ವರ್ಷ ವಯೋಮಿತಿಯ ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗೆ ದೈಹಿಕ ಶಿಕ್ಷಕ ರಾಘವೇಂದ್ರ ಗಾಂವಕರ ತರಬೇತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಚಿರಂಜೀವಿ ಈ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮಮತಾ ನಾಯ್ಕ, ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.