UK Express Logo
BREAKING

ದಾಂಡೇಲಿ, ಜೋಯಿಡಾ ತಾಲೂಕಿನಲ್ಲಿ ನ.13 ಮತ್ತು 14ರಂದು ವಿದ್ಯುತ್ ವ್ಯತ್ಯಯ

By UKExpress on 11/13/2026

ದಾಂಡೇಲಿ: 11 ಕೆ.ವಿ. ವಿದ್ಯುತ್ ಮಾರ್ಗಗಳು ಹಾಗೂ ಪರಿವರ್ತಕಗಳ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ವಿವಿಧ ಗ್ರಾಮಗಳು ಹಾಗೂ ಪ್ರದೇಶಗಳಲ್ಲಿ ನವೆಂಬರ್ 13 ಮತ್ತು 14ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನವೆಂಬರ್ 13ರಂದು ದಾಂಡೇಲಿ ನಗರದ ಹಳಿಯಾಳ ರಸ್ತೆ ಫೀಡರ್ ವ್ಯಾಪ್ತಿಯ ಹಸನಮಾಳ, ಅಂಬೇವಾಡಿ, ಆಯುಷ್ ಆಸ್ಪತ್ರೆ, ವಿಟಿಯು ಕಾಲೇಜು ಹಾಗೂ ಡಿಗ್ರಿ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

ಜೋಯಿಡಾ ತಾಲೂಕಿನ ಕುಂಬಾರವಾಡಾ–ಅಣಶಿ ಫೀಡರ್ ವ್ಯಾಪ್ತಿಯ ಕುಂಡಲ, ಕೇಲೋಲಿ, ಕಾರಸಂಗಳ, ಗಟ್ಟಾವ ಮತ್ತು ಕುರಾವಳಿ ಪ್ರದೇಶಗಳಲ್ಲಿ ಹಾಗೂ ಗಣೇಶಗುಡಿ ಫೀಡರ್ ವ್ಯಾಪ್ತಿಯ ನಾಗೋಡಾ, ಪಾಂಜೇಲಿ, ಪಿಪೋಡಾ, ದುಪೆವಾಡಿ, ಚಾಪಖಂಡ (ದಬಗಾರ) ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅದೇ ರೀತಿ ರಾಮನಗರ (ಬೋರಿಕೋರಿ) ಫೀಡರ್ ವ್ಯಾಪ್ತಿಯ ಶಿಂಗರಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಮೈಲಾರಲಿಂಗ ಫೀಡರ್ ವ್ಯಾಪ್ತಿಯ ಮಾವಳಂಗಿ, ಕೊಂಡಪಾ ಮತ್ತು ಹಳೆ ಕೊಂಡಪಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ನವೆಂಬರ್ 14ರಂದು ಜೋಯಿಡಾ ತಾಲೂಕಿನ ರಾಮನಗರ ಟೌನ್ ಹಾಗೂ ಅಡಾಳಿ ಫೀಡರ್ ವ್ಯಾಪ್ತಿಯ ರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಹಾರ್ಲಿ, ತಿನೈಘಾಟ್, ಪಾಯಸವಾಡಿ, ಬರಲಕೋಡ್, ಪಿರೆಗಾಳಿ ಮತ್ತು ಮಾರ್ಸಂಗಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಿಗದಿತ ನಿರ್ವಹಣಾ ಕಾಮಗಾರಿಗಳಿಗೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ದಾಂಡೇಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.