UK Express Logo

ಅ.7ರಂದು ಕುಮಟಾ, ಹೊನ್ನಾವರ, ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ

By UKExpress on 10/6/2026

ಕುಮಟಾ: ಕುಮಟಾದ 110 ಕೆ.ವಿ. ಉಪಕೇಂದ್ರದಲ್ಲಿ 11 ಕೆ.ವಿ. ಧಾರೇಶ್ವರ ಹಾಗೂ 11 ಕೆ.ವಿ. ಬಾಡಾ ಮಾರ್ಗದ ಜಿ.ಒ.ಎಸ್. ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಅ.7ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಧಾರೇಶ್ವರ ಹಾಗೂ ಬಾಡಾ ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಕುಮಟಾ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಹೊನ್ನಾವರ: ಗೇರುಸೊಪ್ಪದ 33/11 ಕೆ.ವಿ. ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿನ 33 ಕೆ.ವಿ. ಮಾರ್ಗದ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅ.7ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ರೈಟ್ ಕಾಲೋನಿ, ಲೆಫ್ಟ್ ಕಾಲೋನಿ, ಮಗೋಡ ಹಾಗೂ ಉಪ್ಪೋಣಿ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಕಾರವಾರ: ಕಾರವಾರ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಲೈನ್ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಅ.7ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತೇಲಂಗರೋಡ, ನಂದನಗದ್ದಾ, ಕೆ.ಎಚ್.ಬಿ., ಸುಂಕೇರಿ, ಕೋಡಿಬಾಗ ಹಾಗೂ ಕಾರವಾರ ಟೌನ್ ಫೀಡರ್‌ನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಕಾರವಾರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.