UK Express Logo

ಕುಮಟಾದಲ್ಲಿ ನಕಲಿ PhonePe ಮೆಸೇಜ್ ತೋರಿಸಿ ₹16,700 ಮೌಲ್ಯದ ಮೊಬೈಲ್ ವಂಚನೆ

By UKExpress on 9/12/2026

ಕುಮಟಾ: ಗ್ರಾಹಕನ ಸೋಗಿನಲ್ಲಿ ಮೊಬೈಲ್‌ ಶಾಪ್‌ಗೆ ಬಂದ ವ್ಯಕ್ತಿಯೊಬ್ಬ ನಕಲಿ PhonePe ಪಾವತಿ ಸಂದೇಶ ತೋರಿಸಿ ₹16,700 ಮೌಲ್ಯದ ಮೊಬೈಲ್‌ ಪಡೆದುಕೊಂಡು ವಂಚಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕನಂತೆ ಅಂಗಡಿಗೆ ಬಂದು ರಿಯಲ್‌ಮಿ ಕಂಪನಿಯ C100X ಡೀಪ್‌ ಬ್ಲೂ ಬಣ್ಣದ ಮೊಬೈಲ್‌ ಫೋನ್‌ (4/64 GB) ಖರೀದಿಸಿದ್ದಾನೆ. ಮೊಬೈಲ್‌ನ ಬೆಲೆ ₹16,700 ಆಗಿದ್ದು, ಹಣವನ್ನು PhonePe ಮೂಲಕ ಪಾವತಿಸಿರುವುದಾಗಿ ನಂಬಿಸುವ ರೀತಿಯಲ್ಲಿ ನಕಲಿ ಮೆಸೇಜ್‌ ತೋರಿಸಿದ್ದಾನೆ.

ಅಂಗಡಿ ಮಾಲೀಕರಿಗೆ ಹಣ ಪಾವತಿಯಾಗಿದೆ ಎಂದು ನಂಬಿಸಿ, ಯಾವುದೇ ಹಣ ನೀಡದೇ ಮೊಬೈಲ್‌ ತೆಗೆದುಕೊಂಡು ಸ್ಥಳದಿಂದ ತೆರಳಿದ್ದಾನೆ. ಬಳಿಕ ಪಾವತಿ ಆಗದಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಧನಂಜಯ ಮಂಜುನಾಥ ನಾಯ್ಕ ಅವರು ಕುಮಟಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಕುಮಟಾ ಪೊಲೀಸ್‌ ಠಾಣೆಯ ತನಿಖಾ ವಿಭಾಗ-2ರ ಪಿಎಸ್‌ಐ ವಿಠಲ ಮಲವಡಕರ ಅವರು ಕೈಗೊಂಡಿದ್ದು, ತನಿಖೆ ಮುಂದುವರಿದಿದೆ.