Trending News

``ಸಾವಿನಮನೆ''ಯಲ್ಲಿ ಮತ್ತೊಂದು ಆಘಾತ!
ಪಟ್ಟಣದಲ್ಲಿ ಹೈಟೆಕ್ ವೈದ್ಯಕೀಯ ಪರೀಕ್ಷಾ ಯಂತ್ರಗಳನ್ನು ಹೊಂದಿದ್ದರೂ ``ಸಾವಿನಮನೆ'' ಎಂದೇ ಕುಖ್ಯಾತಿ ಪಡೆದ ಖಾಸಗಿ ಆಸ್ಪತ್ರೆಯಿಂದ ಹೊರ ಹೋದ ರೋಗಿ ಕೇವಲ ನಾಲ್ಕೇ ಗಂಟೆಯಲ್ಲಿ ಪ್ರಾಣ ಕಳೆದುಕೊಂಡ ಘಟನೆ ಕುಮಟಾದಲ್ಲಿ ಸೋಮವಾರ (ನಿನ್ನೆ) ರಾತ್ರಿ ನಡೆದಿದೆ.

ರಾಷ್ಟ್ರೀಯ ನಾಟ್ಯೋತ್ಸವದ 8ನೇ ದಿನ ಕರ್ನಾಟಕ ರಾಜ್ಯದ ಕಲಾಋಣ ಕೆರೆಮನೆ ಮೇಳದ ಮೇಲಿದೆ: ವಿಶ್ವೇಶ್ವರ ಭಟ್ಟ
ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ರಾಷ್ಟ್ರೀಯ ನಾಟ್ಯೋತ್ಸವದ ಎಂಟನೇ ದಿನದ ಸಭಾ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟ, ಯಕ್ಷಗಾನ ಭಾಗವತರು ಮತ್ತು ಕಲಾ ಪೋಷಕರಾದ ಪಟ್ಲ ಸತೀಶ ಶೆಟ್ಟಿ, ಮೈಸೂರಿನ ಯಕ್ಷಗಾನ ಸಂಘಟಕರಾದ ಹೇರಂಭ ಭಟ್ಟ ಅಗ್ಗರೆ ಮತ್ತು ಯಕ್ಷಗಾನ ಕಲಾವಿದರಾದ ಕೃಷ್ಣಮೂರ್ತಿ ಗರ್ತಿಕೆರೆ ಇವರಿಗೆ ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಅಕ್ರಮ ಗಾಂಜಾ ಸಾಗಾಟ :ಇಬ್ಬರ ಬಂಧನ
ಶಿರಸಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.

ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ಕಮ್ಮಟಗಳು ಮಹತ್ವದ ಅಧ್ಯಾಯ: ಎಚ್.ಎನ್.ನಾಯ್ಕ
ಕುಮಟಾ: ಪಟ್ಟಣದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದಲ್ಲಿ ಸವಿ ಫೌಂಡೇಶನ್ ಮೂಡಬಿದ್ರೆ-ಹಿರೇಗುತ್ತಿ ಮತ್ತು ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯ ಕುಮಟಾದ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಕಾವ್ಯಕಮ್ಮಟ ಕಾರ್ಯಕ್ರಮ ನಡೆಯಿತು.

ತೆಂಗಿನಗುಂಡಿ ದೇವಸ್ಥಾನದಲ್ಲಿ ಕಳವು: ಬೈಕ್ ಸಮೇತ ಕಳ್ಳನ ಬಂಧನ!
ಭಟ್ಕಳ: ಇಲ್ಲಿನ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ರವಿವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು 24 ಗಂಟೆ ಕಳೆಯುವುದರೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕಳ್ಳತನಕ್ಕೆ ಬಳಸಿದ ಬೈಕ್ ಮತ್ತು ಕಳವು ಮಾಡಿದ್ದ ₹1.10 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಮಟಾ ಸಿವಿಲ್ ಆಸ್ಪತ್ರೆಯ ಬಹುತೇಕ ವೈದ್ಯರು ವರ್ಗಾವಣೆ ಪಟ್ಟಿಯಲ್ಲಿ!
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಧ್ಯಭಾಗ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ಹಳೆ ಕೂಗು. ಜಿಲ್ಲೆಯ ಹೋರಾಟಗಾರರು ಕೂಗುತ್ತಿದ್ದಾರೆಯೇ ಹೊರತು ಈ ವಿಷಯದಲ್ಲಿ ಸರ್ಕಾರ ಒಂದಿಂಚೂ ಚಲಿಸಿದಂತೆ ಕಾಣುತ್ತಿಲ್ಲ.