
ಶಿರಸಿ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.
ಅನುರಾಗ ಗುರು ಜೋಗಳೆಕರ್ (23) ಮತ್ತು ಕೆ ಎಸ್ ಆರ್ ಟಿ ಸಿ ಡಿಫೊ ಸಮೀಪದ ನಿವಾಸಿ ಸೋಹನ ಲೊಕೇಶ್ ಭಂಡಾರಿ (23) ಬಂಧಿತ ಆರೊಪಿಗಳು. ಬಂದಿತರಿಂದ 5 ಸಾವಿರ ರೂಪಾಯಿ ಮೌಲ್ಯದ 101 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಶಿರಸಿ ತಾಮೀರ್ ಬ್ಯಾಂಕ್ ಹತ್ತಿರದ ಶಿರಸಿಯ ನಿಲೆಕಣಿ ನಾಕಾದಲ್ಲಿ ಪೋಲಿಸರು ವಾಹನ ತಪಾಸಣೆ ನಡೆಸುತ್ತಿರುವಾಗ ಆರೋಪಿತರು ಕುಮಟಾ ಕಡೆಯಿಂದ ಸ್ಕೂಟಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದು, ಶಿರಸಿ ಕಡೆಗೆ ಮಾರಾಟ ಮಾಡಲು ಹೋಗುತ್ತಿರುವ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್,ಸಿಪಿಆಯ್ ಶಶಿಕಾಂತ ವರ್ಮಾ ರವರ ಮಾರ್ಗದರ್ಶನ ಹಾಗು ಪಿಎಸ್ಐ ನಾಗಪ್ಪ.ಬಿ ಸಿಬ್ಬಂದಿಗಳಾದ ಹನುಮಂತ ಕಬಾಡಿ,ನಾಗಪ್ಪ ಲಮಾಣಿ,ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ಕ್ಯಾರಕಟ್ಟಿ, ರಾಜಶೇಖರ,ಅರುಣ ಲಮಾಣಿ, ಪ್ರವೀಣ್ ಎನ್,ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.