ಬದುಕಿಗೆ ಹೊಸ ಶಕ್ತಿ ತುಂಬುತ್ತಿರುವ ಚಾತುರ್ಮಾಸ್ಯ- ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್
ಕುಮಟಾ: ಬದುಕಿಗೆ ಹೊಸ ಶಕ್ತಿ ತುಂಬುವ ಕೈಂಕರ್ಯಗಳಿಗೆ ಚಾತುರ್ಮಾಸ್ಯ ಕಾರ್ಯಕ್ರಮ ಪ್ರೇರಕವಾಗಿದೆ ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.
ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್‌ರ ಚಾತುರ್ಮಾಸ್ಯ ವ್ರತಾಚರಣೆಯ ೩೮ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕಿನ ಹೆಗಡೆ ಗ್ರಾಪಂ ಕೂಟದಿಂದ ಸಲ್ಲಿಸಲಾದ ಗುರು ಸೇವೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಕಠಿಣ ಯೋಗ, ಧ್ಯಾನ ಸಾಧನದ ಮೂಲಕ ಬುದ್ಧ ಹೇಗೆ ಸರ್ವಸಕ್ತನಾದ ಎಂಬುದರ ಬಗ್ಗೆ ಬುದ್ಧ ಚರಿತ್ರೆಯಲ್ಲಿ ಉಲ್ಲೇಖಿಸಲಾದ ಭಕ್ತಿಯ ಕಥೆಗಳನ್ನು ಹೇಳುತ್ತ, ಪ್ರಾಣಿಯ ಜೀವ ರಕ್ಷಣೆಗಾಗಿ ತನ್ನ ಶರೀರವನ್ನೆ ದಾನ ಮಾಡಿದ ಬುದ್ದನು ತ್ಯಾಗದ ತುತ್ತ ತದಿಯಲ್ಲಿ ನಿಂತಿದ್ದ. ಶರೀರ ಎಂಬ ರಥಕ್ಕೆ ಆತ್ಮವೇ ಲಗಾಮು, ಮನಸ್ಸೆ ಸಾರಥಿ. ಪಂಚೇAದ್ರೀಯಗಳೆ ರಥದ ಕುದುರೆಗಳು. ಸಾರಥಿಯು ಕುದುರೆಗಳನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯವನ್ನು ಮಾಡುವ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರವಾಗಬೇಕು. ಬದುಕಿಗೆ ಆಸರೆಯಾದ ಸಂಸ್ಕಾರಯುತ ಶಿಕ್ಷಣವೇ ಇಂದು ಮಾಯವಾಗಿದೆ. ಪಾಲಕರೇ ತಮ್ಮ ಮಕ್ಕಳನ್ನು ಅಂಕಗಳಿಗೆ ಸೀಮಿತ ಮಾಡಿದ್ದಾರೆ. ಹಣ ಗಳಿಕೆಯೇ ಬದುಕಿನ ಮೂಲಾಧಾರ ಎಂಬAತಾಗಿದೆ. ಪಾಲಕರು ಮಕ್ಕಳಿಗೆ ಸೂಕ್ತ ಸಂಸ್ಕಾರವನ್ನು ನೀಡದಿದ್ದರೆ ಸಮಾಜದ ಉದ್ದಾರ ಹೇಗೆ ಸಾಧ್ಯ.? ಮಾನವೀಯ ಮೌಲ್ಯಗಳ ಸಂಸ್ಕಾರಯುತ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡಿದರೆ, ಸಮಾಜದ ಸುಧಾರಣೆ ಸಾಧ್ಯ. ಇಂಥ ಸಂಸ್ಕಾರಗಳನ್ನು ತುಂಬುವ ಕಾಯಕವನ್ನು ಚಾತುರ್ಮಾತ್ಯ ಕಾರ್ಯಕ್ರಮ ಮಾಡುತ್ತಿದೆ. ಇಂಧ ವೇದಿಕೆಯನ್ನು ನಿರ್ಮಿಸಿರುವ ನಾಮಧಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದೆ. ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮವಾಗಿ ರೂಪಗೊಂಡಿದ್ದು, ಮತ್ತೆ ಈ ಸುವರ್ಣಾವಕಾಶ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎಲ್ಲ ಸಮಾಜಗಳನ್ನು ಒಂದೇ ಛತ್ರದಡಿ ತಂದು ಎಲ್ಲರಿಗೂ ಪ್ರೀತಿ-ವಿಶ್ವಾಸ ಸಂತಸವನ್ನು ಹಂಚುವ ಕಾರ್ಯ ಮಾಡುತ್ತಿರುವುದು ಆ ಭಗವಂತನಿಗೆ ಸಲ್ಲಿಕೆಯಾಗುತ್ತದೆ. ನಾರಾಯಣ ಗುರುಗಳು ಎಲ್ಲ ಜಾತಿಗಳನ್ನು ಸಮಾನವಾಗಿ ಕಂಡವರು. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದರು. ನಾವೆಲ್ಲ ಒಂದೇ ಜಾತಿ ಎಂಬ ಭಾವನೆ ಸಮಾಜದ ಸಂಘದೊಳಕ್ಕೆ ಇರಬೇಕು. ಸಮಾಜದಲ್ಲಿ ಸಹೋದರತೆ ಭಾವ ಇರಬೇಕು. ಪ್ರಕೃತಿಯು ಕೂಡ ಎಲ್ಲರಿಗೂ ಸಮಾನತೆ ಸಾರಿದಂತೆ ನಾವು ಕೂಡ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕು. ಭಕ್ತಿ ಮತ್ತು ಕರ್ಮ ಯೋಗದ ಮೂಲಕ ಭಗವಂತನಲ್ಲಿ ನಮ್ಮನ್ನು ಅರ್ಪಿಸಿಕೊಂಡು ಭವಬಂಧನದಿAದ ಮುಕ್ತರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಮತ್ತು ಶಾಸಕ ಆರ್ ವಿ ದೇಶಪಾಂಡೆ ಅವರು ಕಾಂಗ್ರೆಸ್ ಮುಖಂಡರ ಜೊತೆಗೂಡಿ ಕೋನಳ್ಳಿಗೆ ಆಗಮಿಸಿ, ಶ್ರೀಗಳ ದರ್ಶನ ಪಡೆದು ಫಲಮಂತ್ರಾಕ್ಷತೆಯ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಆರ್ ವಿ ದೇಶಪಾಂಡೆ ಅವರು, ಜಿಲ್ಲೆಯಲ್ಲಿ ಅತೀ ದೊಡ್ಡ ಸಮಾಜವಾದ ನಾಮಧಾರಿ ಸಮಾಜ ಒಂದು ಕಾಲದಲ್ಲಿ ಶಿಕ್ಷಣದಿಂದ ದೂರವಿದ್ದ ಸಮಾಜವಾಗಿತ್ತು. ಆದರೆ ಈಗ ಈ ಸಮಾಜ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುಂದುವರೆಯುತ್ತಿದೆ. ಈ ಸಮಾಜ ಚಾತುರ್ಮಾಸ್ಯ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಸಂಘಟಿಸಿರುವ ಬಗ್ಗೆ ಅನೇಕರು ನನ್ನ ಬಳಿ ಹೇಳಿಕೊಂಡಿದ್ದಾರೆ. ಗುರುಗಳ ಮಾರ್ಗದರ್ಶನದಲ್ಲಿ ಈ ಸಮಾಜ ಇನ್ನಷ್ಟು ಮುಂದುವರೆಯುವ ಮೂಲಕ ಆದರ್ಶ ಸಮಾಜವಾಗಿ ರೂಪಗೊಳ್ಳಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೇಸ್ ಮುಖಂಡ ರತ್ನಾಕರ ನಾಯ್ಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ, ಪ್ರಮುಖರಾದ ರವಿಕುಮಾರ ಶೆಟ್ಟಿ, ಚೇತನ ಶೇಟ್, ಸುಷ್ಮಾ ರಾಜಗೋಪಾಲ ರೆಡ್ಡಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಜೆಡಿಎಸ್ ಹೊನ್ನಾವರ ತಾಲೂಕು ಅಧ್ಯಕ್ಷ ಟಿ ಟಿ ನಾಯ್ಕ ಇತರರು ಇದ್ದರು.
ಚಾತುರ್ಮಾಸ್ಯದ ೩೮ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ತ ನಾಮಧಾರಿ ಸಮಾಜ ಬಾಂಧವರು ಹಾಗೂ ಮೋಗೇರ ಸಮಾಜ ಬಾಂಧವರು ಕುಮಟಾದವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಎಂ. ಎಸ್. ನಾಯ್ಕ್ ದಂಪತಿಗಳು ಹೊನ್ನಾವರ ಇವರು ವಿಷೇಶ ಸೇವೆ ಸಲ್ಲಿಸಿದರು. ಸರ್ವೇಶ್ವರ್ ನಾರಾಯಣ ನಾಯ್ಕ್ ಕುಟುಂಬದವರು ಕೋನಳ್ಳಿ, ಲಕ್ಷ್ಮಣ್ ಪಾಂಡುರAಗ ನಾಯ್ಕ್ ಕುಟುಂಬದವರು ಮಾಸೂರು ಹಾಗೂ ಬಿಳಿಯಪ್ಪ ಗಣಪಯ್ಯ ನಾಯ್ಕ್ ಕುಟುಂಬದವರು ಹೆಗಡೆ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಹರೀಶ್ ಕುಮಾರ್ ಮತ್ತು ಅನಿಲ್ ಕುಮಾರ್ ನ್ಯಾಯವಾದಿಗಳು ಬೆಳ್ತಂಗಡಿ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮಾಜಿ ಎಂ.ಎಲ್.ಸಿ, ಮಂಜುನಾಥ್ ನಾಯಕ್ ಬಿ.ಇ.ಒ ಆಫೀಸರ್, ಡಾ. ಎಂ. ಕೆ ನಾಯ್ಕ್ ಶೀಗಳ್ಳಿಮನೆ ಕೋನಳ್ಳಿ ವಿಶ್ರಾಂತ ಉಪಕುಲಪತಿಗಳು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ವಿಜ್ಞಾನಿಗಳು ಶಿವಮೊಗ್ಗ ವಿನಾಯಕ ಭಟ್ ಸಂತೇಗುಳಿ ಗ್ರಾಮ ಪಂಚಾಯತ್ ಸದಸ್ಯರು ಇವರು ಆಗಮಿಸಿ, ಶ್ರೀಗಳ ದರ್ಶನ ಪಡೆದರು. ಹೆಗಡೆ, ಸಂಕುಳಿ, ಮಾಸೂರು, ಕೋನಳ್ಳಿ, ಇಡಗುಂಜಿ, ಬೈಂದೂರು ಹೆರವಟ್ಟಾ, ಶಿರಸಿ ಮತ್ತು ಭಟ್ಕಳ ಗ್ರಾಮದ ಗ್ರಾಮಸ್ಥರು ಗುರು ಸೇವೆ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಸುಷ್ಮಾ ರಾಜಗೋಪಾಲ್ ರೆಡ್ಡಿ ಬೆಂಗಳೂರು ಇವರು ಈ ದಿನ ಸಿಹಿ ವಿತರಿಸಿದರು. ಬಳಿಕ ಶ್ರೀಗಳು ಎಲ್ಲರಿಗೂ ಮಂತ್ರಾಕ್ಷತೆ ವಿತರಿಸಿ, ಹರಸಿದರು. ಮಧ್ಯಾಹ್ನ ನಡೆದ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಧನ್ಯರಾದರು.