ಸ್ಪೆಷಲ್ ರಿಪೋರ್ಟ್

300 ಸಂತ್ರಸ್ತೆಯರಿಗೆ ಪುನರ್ವಸತಿ: ‘ದಿ ಕೇರಳ ಸ್ಟೋರಿ’ ನಿರ್ಮಾಪಕರಿಂದ ಘೋಷಣೆ

ಮುಂಬೈ: ಮತಾಂತರಕ್ಕೆ ಒಳಗಾಗಿದ್ದಾರೆ ಎನ್ನಲಾದ 300 ಸಂತ್ರಸ್ತೆಯರಿಗೆ ಆಶ್ರಮವೊಂದರಲ್ಲಿ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಮತ್ತು ಅದಕ್ಕಾಗಿ 51 ಲಕ್ಷ ಇರಿಸುವುದಾಗಿ ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ಮಾಪಕ ವಿಪುಲ್ ಶಾ ಅವರು ಘೋಷಿಸಿದ್ದಾರೆ.
ಸುದೀಪೆ ಸೇನ್ ಅವರು ದಿ ಕೇರಳ ಸ್ಟೋರಿ ಕಥೆ ಬರೆದದ್ದು ಮತ್ತು ನಾವು ಈ ಚಿತ್ರ ನಿರ್ಮಾಣ ಮಾಡಿದ್ದು, ಮತಾಂತರದ ಸಂತ್ರಸ್ತೆಯರಿಗೆ ಒತ್ತಾಸೆಯಾಗಿ ನಿಲ್ಲುವ ಉದ್ದೇಶದಿಂದ. ಸನ್‍ಶೈನ್ ಪಿಕ್ಚರ್ಸ್ ಮತ್ತು ಚಿತ್ರತಂಡವು ಸಂತ್ರಸ್ತೆಯರಿಗಾಗಿ 51 ಲಕ್ಷ ದೇಣಿಗೆ ನೀಡಲಿದೆ. ನಮ್ಮ ‘ಪ್ರೋಟೆಕ್ಟ್ ದಿ ಡಾಟರ್ಸ್’ ಉಪಕ್ರಮವೂ ಈ ನಿಟ್ಟಿನಲ್ಲಿ ಒಂದು ಹೆಜ್ಜೆ’ ಎಂದು ವಿಪುಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ವೇಳೆ ಚಿತ್ರತಂಡ ಮತ್ತು ಮತಾಂತರದ ಸಂತ್ರಸ್ತೆಯರು ಎನ್ನಲಾದ 26 ಮಹಿಳೆಯರು ವೇದಿಕೆ ಮೇಲೆ ಹಾಜರಿದ್ದರು. ಈ ಎಲ್ಲಾ ಮಹಿಳೆಯರೂ ತುಂಬಾ ಧೈರ್ಯವಂತೆಯರು. ಪ್ರತಿದಿನ ಸಾಕಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಆ ಎಲ್ಲಾ ಅಪಾಯಗಳ ನಡುವೆಯೂ ಇಲ್ಲಿ ಮಾತನಾಡಲು ಬಂದಿದ್ದಾರೆ ಎಂದು ವಿಪುಲ್ ಹೇಳಿದರು.
ಚಿತ್ರದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಯಾವುದೇ ಧರ್ಮದ ಕುರಿತ ಚಿತ್ರವಲ್ಲ. ಈ ಚಿತ್ರದಲ್ಲಿರುವ ಮೂವರು ಹುಡುಗಿಯರು ದೇಶದ ಸಾವಿರಾರು ಹುಡುಗಿಯರನ್ನು ಪ್ರತಿನಿಧಿಸುತ್ತಾರೆ. ಈ ಚಿತ್ರದಲ್ಲಿ ತೋರಿಸಲಾಗಿರುವ ಪ್ರತಿ ದೃಶ್ಯ, ಆಡಲಾಗಿರುವ ಪ್ರತಿ ಪದವೂ ಸತ್ಯ. ಅವು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿಯುವ ಕುತೂಹಲವಿದ್ದರೆ ವೇದಿಕೆಯಲ್ಲಿರುವ ಮಹಿಳೆಯರನ್ನೇ ಕೇಳಿ ಎಂದರು.
ತಾವು ಅನುಭವಿಸಿದ ಸಂಕಷ್ಟಗಳ ಕುರಿತು ಮಾತನಾಡಿದರೆ ಜನರು ತಮ್ಮನ್ನು ವಿಮರ್ಶೆಗೊಳಪಡಿಸುತ್ತಾರೆ ಎಂದು ತಿಳಿದಿದ್ದರೂ ಈ ಮಹಿಳೆಯರು ತಮ್ಮ ಕಥೆಗಳನ್ನು ಹೇಳಲು ಮುಂದೆ ಬಂದಿದ್ದು ಅಭಿನಂದನಾರ್ಹ ಎಂದು ನಟಿ ಆದಾ ಶರ್ಮಾ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
google.com, pub-7043077280577910, DIRECT, f08c47fec0942fa0

You cannot copy content of this page

Close