ಲೇಖನ
“ನಿರ್ಮಾ ವಾಷಿಂಗ್ ಪೌಡರ” ತಂದೆ ಮಗಳ ಸ್ಪೂರ್ತಿದಾಯಕ ಕಥೆ

ಪರಿಶ್ರಮ, ನಿರ್ದಿಷ್ಟ ಯೋಜನೆ, ಸ್ವಾವಲಂಬಿತನ ಇಲ್ಲದೇ ಯಾವ ವ್ಯಕ್ತಿಯೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಸಾಧಿಸಿಯೇ ತೀರುತ್ತೇನೆ ಅನ್ನುವ ಛಲವಿರಬೇಕು.
ಆ ತಂದೆಗೆ ಮಗಳ ಮೇಲೆ ಅತಿಯಾದ ವ್ಯಾಮೋಹ. ಮಗಳ ಅಕಾಲಿಕ ಸಾವು ಆ ತಂದೆಗೆ ಬಹಳವಾಗಿ ಕಾಡಿತು. ಮಗಳ ನೆನಪನ್ನು ಇನ್ನೂ ಹಸಿರಾಗಿ ಉಳಿಸಲು ತಾವೇ ಸ್ವತಃ ಮಗಳ ಹೆಸರಲ್ಲಿ ಕಂಪನಿ ತೆರೆದು ಅವಳ ಹೆಸರಲ್ಲೇ ಒಂದು ಪ್ರಾಡೆಕ್ಟನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದರು. ಸಾಕಷ್ಟು ಅಡಚಣೆಗಳು,ಸತತ ಪ್ರಯತ್ನ, ಎದೆಗುಂದದ ಆತ್ಮವಿಶ್ವಾಸ, ಬಿಡದ ಛಲದಿಂದ ಮಗಳ ಹೆಸರನ್ನು ಜನರ ಬಾಯಲ್ಲಿ ಅಚ್ಚಳಿಯುವಂತೆ ಮಾಡಿ ಇಂದು ಆ ಕಂಪನಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ.
“ವಾಷಿಂಗ್ ಪೌಡರ ನಿರ್ಮಾ”
ಬಹುಶಃ ನೀವೆಲ್ಲಾ ಈ ಜಾಹಿರಾತನ್ನು ಕೇಳಿರಬಹುದು. ಹೌದು ಸ್ನೇಹಿತರೇ ಇದು ವಾಷಿಂಗ್ ಪೌಡರ ನಿರ್ಮಾ ಕಂಪನಿಯ ಸಂಸ್ಥಾಪಕ ಕರ್ಸನ್ ಬಾಯ್ ಪಟೇಲ್ ಹಾಗೂ ಕಂಪನಿಗೆ ನಿರ್ಮಾ ಹೆಸರು ಬರಲು ಕಾರಣಳಾದ ಅವರ ಮಗಳಾದ ನಿರುಪಮಾಳ ಕಥೆ.
branded shirt’s
contect whatsapp:8762537527
ಬಿ.ಎಸ್.ಸಿ ಕೆಮೆಸ್ಟ್ರಿ ಪದವೀಧರರಾದ ಕರ್ಸನ್ ಬಾಯ್ ಪಟೇಲರು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಮನೆಯ ಹಿಂದಿನ ಜಾಗದಲ್ಲಿ ಸಣ್ಣದೊಂದು ಶೆಡನಂತಹ ರೂಮೊಂದನ್ನು ಮಾಡಿಕೊಂಡು ಮಗಳ ನಿರುಪಮಾಳ ನೆನಪಿಗಾಗಿ ನಿರ್ಮಾ ಎಂಬ ಹೆಸರಿನ ವಾಷಿಂಗ್ ಪೌಡರ ಕಂಪನಿಯನ್ನು ಸಣ್ಣ ಪ್ರಮಾಣದಲ್ಲಿ ಕಟ್ಟಿದರು. ದಿನವೂ ತಾವು ಸೈಕಲ ಮೇಲೆ ಆಫೀಸಿಗೆ ಹೋಗುವ ಸಮಯಕ್ಕೆ ಒಂದಿಷ್ಟು ಪೌಡರ ಪ್ಯಾಕೆಟನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದಷ್ಟು ಜನರಿಗೆ ತಮ್ಮ ಹೊಸ ಆವಿಷ್ಕಾರವನ್ನು ಪರಿಚಯಿಸುತ್ತಿದ್ದರು. ಸಾಯಂಕಾಲ ಮನೆಗೆ ಬರುವಾಗ ಮನೆ ಮನೆಗೆ ತೆರಳಿ ವಾಷಿಂಗ್ ಪೌಡರನ್ನು ಮಾರಿ ಬರುತ್ತಿದ್ದರು. ಅದೇ ರೀತಿ ಈ ವಾಷಿಂಗ್ ಪೌಡರ ನಿಮಗೆ ಇಷ್ಟವಾಗಲಿಲ್ಲ ಎಂದರೆ ಹಣವನ್ನು ವಾಪಸು ನೀಡುತ್ತೇನೆ ಎಂದು ತಮ್ಮ ಗ್ರಾಹಕರಿಗೆ ಭರವಸೆಯನ್ನು ನೀಡುತ್ತಿದ್ದರು.
ಸತತ ಮೂರು ವರ್ಷಗಳ ಕಾಲ ವಾಷಿಂಗ್ ಪೌಡರನ್ನು ತಾವೇ ಮಾರುತ್ತಿದ್ದರು. 1969 ರಲ್ಲಿ ಸರ್ಪ ಎಕ್ಷಲನ್ನು 13 ರೂಪಾಯಿಗೆ ಮಾರುತ್ತಿದ್ದರೆ ಇವರು ತಮ್ಮ ನಿರ್ಮಾ ಪೌಡರನ್ನು 3 ರೂಪಾಯಿ 50 ಪೈಸೆಗಳಿಗೆ ಮಾರುತ್ತಿದ್ದರು. ಇದರಿಂದ ಮಧ್ಯಮ ಕುಟುಂಬಗಳಿಗೆ ಬಹಳ ಉಪಯೋಗವಾಗುತ್ತಿತ್ತು. ಇದರಿಂದ ಅವರ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು.1972 ರಲ್ಲಿ ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜೀನಾಮೆ ನೀಡಿ ಅಹ್ಮದಾಬಾದಿನಲ್ಲಿ ಒಂದು ಚಿಕ್ಕ ಕಂಪನಿಯನ್ನು ಕಟ್ಟುವಲ್ಲಿ ನಿರತರಾದರು.ಇದರಿಂದ ತಮ್ಮ ಸುತ್ತಮುತ್ತಲಿನ ಜನರಿಗೆ ಪ್ರಾಡೆಕ್ಟನ್ನು ಬೇಗ ತಲುಪಿಸಬಹುದು ಎಂಬ ಉದ್ದೇಶವಿತ್ತು.ತಮ್ಮ ಕೆಲಸ ಸ್ವಲ್ಪ ಸ್ವಲ್ಪ ಜಾಸ್ತಿಯಾದ್ದರಿಂದ ಹಾಗೂ ಇನ್ನೂ ಜನರ ಅವಶ್ಯಕತೆ ಇದ್ದುದರಿಂದ ಸೇಲ್ಸಮ್ಯಾನ್ ಹಾಗೂ ನಾಲ್ಕಾರು ಜನ ಕೆಲಸಗಾರರನ್ನು ತೆಗೆದುಕೊಂಡರು. ಇದರಿಂದ ಕೆಲ ವರ್ಷಗಳಲ್ಲಿ ನಿರ್ಮಾ ಗುಜರಾತನಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿತು.
ಗುಜರಾತ ಸಿಟಿಯಲ್ಲಿ ಮೊದ ಮೊದಲು ಅಂತಹ ತೊಂದರೆಯೇನು ಆಗದೆ ಇದ್ದರೂ ಅತಿಯಾದ ಕಾಂಪಿಟೇಶನ್ ಜೊತೆಗೆ ಕ್ರೆಡಿಟ ಬಿಲ್ ಎಂಬ ರಿಟೇಲ್ ವ್ಯಾಪಾರಿಗಳ ನಿಷ್ಕಾಳಜಿಯಿಂದ ನಿರ್ಮಾ ಸ್ವಲ್ಪ ಸ್ವಲ್ಪವೇ ತನ್ನ ಬಲ ಕಳೆದುಹೋಯಿತು. ಇದೆಲವನ್ನೂ ಗಮನಿಸಿದ ಕರ್ಸನ್ ಬಾಯ್ ಪಟೇಲರವರು ತಮ್ಮ ಸಹದ್ಯೋಗಿಗಳ ಜೊತೆ ಒಂದು ಮೀಟಿಂಗ್ ಏರ್ಪಡಿಸುತ್ತಾರೆ. ತಮ್ಮ ಸ್ಟಾಕ್ ಯಾರ್ಯಾರ ಬಳಿ ಇರುವುದೋ ಅವರೆಲ್ಲರಿಂದ ಹಿಂತೆಗೆದುಕೊಂಡು ಬನ್ನಿ ಜೊತೆಗೆ ಅವರು ಕೊಟ್ಟಷ್ಟು ಹಣವನ್ನು ತೆಗೆದುಕೊಂಡು ಬನ್ನಿ ಮತ್ತೆ ಇನ್ನು ಮುಂದೆ ಸಪ್ಲೈ ಮಾಡುವುದನ್ನು ನಿಲ್ಲಿಸಿ.ಅವರ ಈ ನಿರ್ಧಾರ ಅವರ ಸಹದ್ಯೋಗಿಗಳಿಗೂ ಏನೊಂದು ಅರ್ಥವಾಗುವುದಿಲ್ಲ. ಕರ್ಸನ್ ಬಾಯ್ ಪಟೇಲರ ಈ ನಿರ್ಧಾರ ಉಳಿದೆಲ್ಲ ರಿಟೇಲ್ ವ್ಯಾಪಾರಿಗಳು ಹಾಗೂ ಇನ್ನಿತರ ಕಾಂಪಿಟೇಟರ್ಸಗಳಿಗೆ ಶಾಕನ್ ಜೊತೆ ಆಶ್ಚರ್ಯವಾಗುತ್ತದೆ. ಈ ರೀತಿ ರಾತ್ರೋ ರಾತ್ರಿ ನಿರ್ಮಾ ಪೌಡರ ಸಪ್ಲೈ ನಿಂತುಹೋಗುತ್ತದೆ.
ಆದರೆ ಕರ್ಜನ್ ಬಾಯ್ ಪಟೇಲರ ಯೋಜನೆಯೇ ಬೇರೆಯಾಗಿತ್ತು. ಆ ಸಮಯದಲ್ಲಿ ಭಾರತ ಅಭಿವೃದ್ದಿ ಆಗುತ್ತಾ ಬರುತ್ತಿತ್ತು. ಬಹುತೇಕ ಮನೆಗಳಲ್ಲಿ ಟೀವಿಯ ಸೌಲಭ್ಯಗಳು ಇದ್ದವು. ನಿರ್ಮಾ ಸಪ್ಲೈ ನಿಲ್ಲಿಸಿರುವುದರಿಂದ ತಮ್ಮ ಬಳಿಯಿರುವ ಅಷ್ಟು ಹಣವನ್ನು ದೂರದರ್ಶನದಲ್ಲಿ ಒಂದು ತಿಂಗಳ ಕಾಲ ಜಾಹಿರಾತು ಹಾಕುವಲ್ಲಿ ತೊಡಗಿಸುತ್ತಾರೆ. ನಂತರ ನಡೆದಿದ್ದೇ ಇತಿಹಾಸ. ಇದೊಂದುಇದೊಂದು ಜಾಹಿರಾತು ಅವರ ಜೀವನವನ್ನೇ ಬದಲಾಯಿಸುತ್ತದೆ. ಹೇಗೆ ಅಂದರೆ ನಿರ್ಮಾ ಬ್ರಾಂಡ್ ಬಗ್ಗೆ ಜನರಿಗೆ ತಿಳಿಯುತ್ತದೆ. ಆಗ ಜನರು ಅಂಗಡಿಗಳಿಗೆ ಹೋಗಿ ನಿರ್ಮಾ ಪೌಡರ ಬೇಕು ಎಂಬ ಬೇಡಿಕೆಯನ್ನು ಇಡುತ್ತಾರೆ. ಆದರೆ ನಿರ್ಮಾ ಪೌಡರನ ಸಪ್ಲೈಲ ನಿಲ್ಲಿಸಿರುವುದರಿಂದ ಯಾವುದೇ ಅಂಗಡಿಗಳಲ್ಲಿ ಸ್ಟಾಕ್ ಇರುವುದಿಲ್ಲ. ಇದರಿಂದ ಅಂಗಡಿಗಳ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಕರ್ಜನ್ ಪಟೇಲರು ತಮ್ಮ ಸಹದ್ಯೋಗಿಗಳನ್ನು ಇನ್ನೊಮ್ಮೆ ಮೀಟಿಂಗ್ ಕರೆದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಇನ್ನೂ ಮುಂದೆ ನಿರ್ಮಾ ಪ್ರೊಡೆಕ್ಟ ಸಾಲ ಕೊಡುವುದಿಲ್ಲ, ಏನಿದ್ದರೂ ಕ್ಯಾಶ ಆನ್ ಡೆಲಿವರಿ ಎಂಬ ಬರಹವನ್ನು ನಮೂದಿಸಿರುವ ಟರ್ಮ್ಸ್ ಆಂಡ ಕಂಡಿಷನ್ ಇರುವ ಲೆಟರಹೆಡನ್ನು ಅವರ ಕೈಯಲ್ಲಿ ನೀಡುತ್ತ ಈ ಬಾರಿ ನಮ್ಮ ಪ್ರಾಡೆಕ್ಟನ್ನು ಎಲ್ಲಾ ವ್ಯಾಪಾರಿಗಳಿಗೂ ಸಪ್ಲೈ ಮಾಡಿ ಎಂಬ ಆಜ್ನೆಯನ್ನು ಹೊರಡಿಸಿದರು. ಈ ಒಂದು ನಿರ್ಧಾರದಿಂದ ಕರ್ಸನ್ ಬಾಯ್ ಪಟೇಲರು ಆವಿಷ್ಕರಿಸಿದ ನಿರ್ಮಾ ಪ್ರಾಡೆಕ್ಟ ಬಹುತೇಕ ಯಶಸ್ವಿ ಕಾಣುತ್ತದೆ. ಮುಂದೆ ಅವರು ತುಳಿದ ಹಾದಿಯೆಲ್ಲವೂ ಯಶಸ್ಸಿನ ಹಾದಿಯೇ. ಅವರ ಮಗಳ ಹೆಸರಿನಿಂದ ಶುರು ಮಾಡಿದ ಪ್ರಾಡೆಕ್ಟ ಪಾಪ್ಯೂಲರ ಬ್ರಾಂಡ್ ಆಗಿರುವುದಲ್ಲದೇ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಈಗವರು ಟಾಪ್ ಬ್ಯುಸಿನೆಸಮೆನಗಳಲ್ಲಿ ಒಬ್ಬರು. ಇದವರ ಪರಿಶ್ರಮದ ಫಲ ಜೊತೆಗೆ ಬುದ್ಧಿವಂತಿಕೆಯ ನಿರ್ಧಾರ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು.
ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಅವರ ಸತತ ಪರಿಶ್ರಮ ಹಾಗೂ ಅವರು ರೂಪಿಸಿಕೊಂಡ ಯೋಜನೆಯೇ ಕಾರಣವಾಗಿರುತ್ತದೆ. ಯಶಸ್ಸು ಯಾರ ಸ್ವತ್ತೂ ಅಲ್ಲ,ಕಾರಣ ಬಹಳಷ್ಟಿರಬಹುದು. ಸೋಲುವುದಕ್ಕೆ ಒಮ್ಮೆ ವಿಶ್ಲೇಸಿಕೊಂಡರೆ ನಮ್ಮೊಳಗೆ ಉತ್ತರ ದೊರಕುವುದು ದೂರದ ಮಾತೇನಲ್ಲ.


