ಯಾವುದೇ ಶುಭಕಾರ್ಯ ಮಾಡುವಾಗ ಸಗಣಿ ತಂದು ಗರಿಕೆ ಮಾಡಿ ಗಣೇಶನನ್ನು ಪ್ರಪ್ರಥಮವಾಗಿ ಪೂಜಿಸಲು ಕಾರಣವೇನು..?

ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಇರುವ ಮೂನ್ನೂರ ಮೂವತ್ತು ಕೋಟಿ ದೇವರುಗಳಲ್ಲಿ ಪ್ರಥಮ ಪೂಜೆ ಗಣೇಶನಿಗೆ ನಡೆಯಲು ಕಾರಣವೇನು? ಹಾಗಾದರೆ ಎಲ್ಲಾ ದೇವರಿಗಿಂತ ಗಣೇಶನೇ ಶ್ರೇಷ್ಠನೇ? ನೀವು ಗಮನಿಸಿರಬಹುದು, ಯಾವುದೇ ಶುಭಕಾರ್ಯ ಮಾಡುವ ಸಂದರ್ಭದಲ್ಲಿ ಗೋವಿನ ಸಗಣಿಯನ್ನು ತಂದು ಅದಕ್ಕೆ ಗರಿಕೆ ಮುಡಿಸಿ ಅದನ್ನೇ ಗಣಪತಿಯೆಂದು ಪೂಜೆ ಮಾಡುತ್ತಾರೆ. ಹಾಗಾದರೆ ಗಣಪತಿಗೂ,ಸಗಣಿ ಮತ್ತು ಗರಿಕೆಗೂ ಎಲ್ಲಿಯ ಸಂಬಂಧ? ಇದರ ಹಿಂದಿನ ಪೌರಾಣಿಕ ಕಥೆಯೇನು ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಶನಿದೇವರೆಂದರೆ ಕೇವಲ ಮಾನವರು ಮಾತ್ರ ಹೆದರುವುದಲ್ಲ ಬ್ರಹ್ಮ,ವಿಷ್ಣು,ಮಹೇಶ್ವರನ ಸಹಿತ ದೇವಾನು ದೇವತೆಗಳೇ ಹೆದರುತ್ತಾರಂತೆ. ಈ ಶನಿದೇವರಿಂದಾಗಿ ಕಷ್ಟ ಅನುಭವಿಸದ ದೇವರಿಗಳೇ ಇಲ್ಲವಂತೆ. ಆದರೆ ವಿಗ್ನ ವಿನಾಶಕ ಗಣಪತಿ ಈ ವಿಷಯದಲ್ಲಿ ತುಂಬಾ ಅದೃಷ್ಟಶಾಲಿ. ಎಲ್ಲಾ ದೇವತೆಗಳನ್ನು ಕಾಡಿದ ಶನಿದೇವರು ಗಣೇಶನನ್ನು ಕಾಡಲು ಏಕೆ ಸಾಧ್ಯವಾಗಲಿಲ್ಲ? ಅದೊಂದು ಸ್ವಾರಸ್ಯಕರ ಘಟನೆ.
ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ. ಶನಿದೇವರು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ ಈ ಮಹಾನುಭಾವ ನನ್ನನ್ನೇನಾದರು ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ. ಈತನಿಗೆ ಸಿಗಲೇಬಾರದು ಎಂದುಕೊಂಡವನೇ ಅಲ್ಲಿಂದ ಓಡತೊಡಗಿದ. ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ, ನಾನೇನು ನಿನಗೆ ತೊಂದರೆ ಮಾಡುವುದಿಲ್ಲ ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೊರಟು ಹೋಗುತ್ತೇನೆ ಎಂದನು. ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಮತ್ತೆ ಓಡತೊಡಗಿದ.ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದರಾಗಾಲಿ ಈತನನ್ನು ಹಿಡಿಯದೇ ಬಿಡುವುದಿಲ್ಲ ಎಂದು ತಿರ್ಮಾನಿಸಿ ಗಣೇಶನ ಬೆನ್ನು ಹತ್ತಿದ.
ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ. ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೇ ಗಣೇಶನ ಕಡೆ ಬರತೊಡಗಿದರು.ಆಗ ನಮ್ಮ ಬುದ್ಧಿವಂತ ಗಣಪ ಅಲ್ಲಿಯೇ ಪಕ್ಕದಲ್ಲಿ ಮೇಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ. ಆ ಗರಿಕೆಯನ್ನು ಹಸು ತಿಂದುಬಿಟ್ಟಿತ್ತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನು ಸಹ ತಿಂದುಬಿಟ್ಟಿತ್ತು. ಇತ್ತ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು.ಎತ್ತ ಹೋಗುವುದೆಂದು ತಿಳಿಯದೇ ಹಸುವಿನ ಸಗಣಿರೂಪದಲ್ಲಿ ಆಚೆಬಂದ. ಗಣೇಶ ಹಸುವಿನ ಸಗಣಿಯ ಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು. ಅಂದಿನಿಂದ ಯಾವುದೇ ಶುಭಕಾರ್ಯ ಮಾಡುವಾಗ ಶನಿಯ ವಕ್ರದೃಷ್ಠಿ ಬೀಳದಿರಲೆಂದು ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ. ಆದ್ದರಿಂದ ಎಲ್ಲಾ ಶುಭಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಪ್ರಥಮ ಪೂಜೆ ಗಣಪನಿಗೆ ಸಲ್ಲಿಸುತ್ತಾರೆ.