ಪಟ್ಟಣದಲ್ಲಿ ಗೊತ್ತುಗುರಿ ಇಲ್ಲದ ಹೆದ್ದಾರಿ ಕಾಮಗಾರಿ: ಸಾರ್ವಜನಿಕರಿಂದ ಆಕ್ರೋಶ

ಹೊನ್ನಾವರ: ಪಟ್ಟಣದಲ್ಲಿ ಹಾದು ಹೋದ ಹೆದ್ದಾರಿ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಪ್ರತಿನಿತ್ಯ ಅಪಘಾತದ ಸಂಭವಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ಸ್ಪಷ್ಟ ನಿಲುವು ಇದುವರೆಗೂ ಬಹಿರಂಗವಾಗಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಪ್ಲೈ ಓವರ್ ಬಗ್ಗೆ ಕಾಂಗ್ರೆಸ್ ಬಿಜೆಪಿ ಅಧಿಕಾರ ಇದ್ದಾಗ ಕೆಸರು ಎರಚುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಯಾವ ಸದ್ದು ಗದ್ದಲವು ಇಲ್ಲದೇ ಇರುವುದು ನೋಡಿದರೆ ತಾಲೂಕಿನ ಜನತೆಗೆ ಫ್ಲೈ ಓವರ್ ಇಲ್ಲದೇ ಅಗಲೀಕರಣವು ಮೂವತ್ತು ಮೀಟರ್ ಸಿಮೀತವಾಗುವುದು ಬಹುತೇಕ ಖಚಿತ ಎನ್ನುವಂತಿದೆ.
ಗೋವಾ ರಾಷ್ಟ್ರೀಯ ಹೆದ್ದಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿ ವಷರ್À ಸಮೀಪಿಸುತ್ತಿದೆ. ಈ ಮಧ್ಯೆ ಸಂಸದ ಅನಂತಕುಮಾರ್ ಹೆಗಡೆ ಅಧಿಕಾರಿಗಳ ಸಭೆ ನಡೆಸಿ ಕಾರಣ ಹೇಳದೆ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದರು. ಆದರೆ ಪಟ್ಟಣದಲ್ಲಿ ಮೇಲ್ಸೇತುವೆಯೋ, ಚತುಷ್ಪಥ ಕಾಮಗಾರಿಯೋ ಎನ್ನುವ ನಿರ್ಧಾರಕ್ಕೆ ಬರದೇ ಇರುವುದು ನೋಡಿದರೆ ಜಿಲ್ಲೆಯ ಅಧಿಕಾರಿಗಳ ಜನಪ್ರತಿನಿಧಿಗಳು ತಾಲೂಕನ್ನು ನಿರ್ಲಕ್ಷ ಮಾಡುತ್ತಿದ್ದಾರೆ.
ನೆರೆಯ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸಾರ್ವಜನಿಕರ ಬೇಡಿಕೆ ಈಡೇರಿಸಿ ಕಾಮಗಾರಿ ನಡೆಯುತ್ತಿದ್ದರೆ, ಜಿಲ್ಲೆಯಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಹಾಗೂ ಸಂಸದರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದೇ ಕೆಲಸ ನಡೆಯುತ್ತಿದೆ. ಮಳೆಗಾಲದ ಸಮಯದಲ್ಲಿ ಹಲವು ಆವಾಂತರಕ್ಕೆ ಐ.ಆರ್.ಬಿ ಅವೈಜ್ಞಾನಿಕ ಕಾಮಗಾರಿ ಸಾಕ್ಷಿಯಾಗಿತ್ತಲೆ ಇದೆ. ಪ್ರತಿವಷರ್À ಮಳೆಗಾಲದಲ್ಲಿ ಸಮಸ್ಯೆ ಆದಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಮಾತ್ರ ಸಿಮೀತವಾಗಿದೆ. ಆದರೆ ಅದೇ ಉತ್ಸಾಹ ರಸ್ತೆ ಹಾಗೂ ಗಟಾರ, ಬೀದಿ ದೀಪದ ಬಗ್ಗೆ ಮುಂದಾಳತ್ವ ವಹಿಸಿ ಮಾಡಲು ಸಾಧ್ಯವಾಗುವುದಿಲ್ಲ. ಸರ್ವೆ ನಡೆಸಿ ಕೆಲವಡೆ ಕಡೆ ಕಟ್ಟಡ ತೆರವು ಮಾಡಿ ಬಿಟ್ಟು ವಷರ್Àವೇ ಉರುಳಿದರೂ ಕಾಮಗಾರಿ ಮುಂದುವರೆದಿಲ್ಲ.
ಪ್ರಾರಂಭದಲ್ಲಿ ಫ್ಲೈ ಓವರ್‍ಗೆ ಅವಕಾಶ ನೀಡಲಾಗಿತ್ತು. ಪ್ಲೈ ಓವರ್ ರಸ್ತೆ ನಿರ್ಮಾಣಕ್ಕೆ 60 ಮೀ. ಸರ್ವೇ ಕೂಡ ನಡೆಸಲಾಗಿತ್ತು. ಇದು ಬೇಡ ಎನ್ನುವ ಕೆಲವರ ಪ್ರಯತ್ನಕ್ಕೆ ಹಿರಿಯ ರಾಜಕಾರಣಿ ಒಬ್ಬರು 40 ಮೀ.ನಂತೆ ಸರ್ವೇ ಮಾಡಿಸಿ ಪರಿಹಾರ ಕೂಡ ಕೊಟ್ಟಾಗಿದೆ. ಈಗ ಮತ್ತೆ 60 ಮೀ. ಸರ್ವೇ ಆದರೆ ಮಾತ್ರ ಪ್ಲೈ ಓವರ್ ಆಗುತ್ತೆ ಅಂದುಕೊಳ್ಳಬಹುದು, ಆ ಸಾಧ್ಯತೆ ಸದ್ಯದ ಮಟ್ಟಿಗೆ ಆಗುವ ಲಕ್ಷಣಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ಹಿರಿಯ ಅಧಿಕಾರಿಗಳ ತಂಡ ಈಗಾಗಲೇ ಇಲ್ಲಿಯ ಕೆಲಸ ಮುಗಿಸಿ ಕಾಶ್ಮೀರ ಸೇರಿಕೊಂಡಿದ್ದಾರೆ ಅನ್ನುವ ಮಾಹಿತಿ ಸಿಕ್ಕಿದೆ. ಈಗ ಇಲ್ಲಿ ಇರುವವರು ಕೇವಲ ನಿರ್ವಹಣೆ ಮಾಡುವವರು ಮಾತ್ರ ಎನ್ನಲಾಗುತ್ತಿದೆ.
ವಷರ್Àಗಳಿಂದ ಗೇರುಸೊಪ್ಪ ಸರ್ಕಲ್ ಹತ್ತಿರ ಅರೆಬರೆ ಕಾಮಗಾರಿ ಮಾಡಿ ಬಿಡಲಾಗಿತ್ತು. ಹಲವು ಅಪಘಾತಕ್ಕೆ ಟ್ಯಾಂಕರ್ ಬಿದ್ದು, ಅನಾಹುತಕ್ಕೂ ಕಾರಣವಾಗಿ ಸಾವು ನೋವು ಸಂಭವಿಸುತ್ತಲೇ ಇದೆ. ಇತ್ತೀಚಿಗೆ ಹೊಸ ರಸ್ತೆ ನಿರ್ಮಾಣ ಮಾಡಿ ಗೇರುಸೊಪ್ಪ, ಭಟ್ಕಳ, ಕುಮಟಾ ಕಡೆಯಿಂದ ಬರುವ ವಾಹನಗಳಿಗೆ ಅನುಕೂಲವಾಗುವಂತೆ ಸರ್ಕಲ್ ನಿರ್ಮಿಸಿರುದೇ ಸಾಧನೆಯಾಗಿದೆ. ಪ್ಲೈ ಓವರ್ ಆಗಬಹುದು ಅಂದುಕೊಂಡವರಿಗೆ ಇಲ್ಲಿ ರಸ್ತೆ ಕೆಲಸ ಮುಗಿಸಿದ್ದು ನೋಡಿದರೆ ಪ್ಲೈ ಓವರ್ ಬಗ್ಗೆ ಹಲವು ಅನುಮಾನ ಕಾಡುತ್ತಿದೆ.
ಸಾರ್ವಜನಿಕರು ವಿವಿಧ ಸಂಘಟನೆಯವರು ಲೆಕ್ಕವಿಲ್ಲದಷ್ಟು ಮನವಿ ನೀಡಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಪಟ್ಟಣದ ಗೇರುಸೊಪ್ಪಾ ವೃತ್ತದಿಂದ ಶರಾವತಿ ವೃತ್ತದವರೆಗೆ ಟ್ರಾಪಿಕ್ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಕಿರಿಕಿರಿ ಉಂಟಾದರೂ ಇದುವರೆಗೂ ಸಮಸ್ಯೆ ಬಗೆಹರಿಸಲು ಇದುವರೆಗೂ ಯಾವ ಅಧಿಕಾರಿ ಜನಪ್ರತಿನಿಧಿ ಮುಂದಾಗಿಲ್ಲ. ರಾಜಕೀಯ ಪಕ್ಷದ ನಾಯಕರು ತೋರಿಕೆಯ ರೀತಿಯಲ್ಲಿ ಪ್ರತಿಭಟನೆ, ಭರವಸೆ ನೀಡುವುದರಲ್ಲೆ ಮುಂದಾಗುತ್ತಿದ್ದು, ಎಲ್ಲಾ ಪಕ್ಷದಿಂದ ಆಯ್ಕೆಯಾದವರು ಇದರ ಬಗ್ಗೆ ಇದುವರೆಗೂ ಗಂಭೀರ ಚಿಂತನೆ ನಡೆಸಿಲ್ಲ. ಈ ಬಗ್ಗೆ ಹುಟ್ಟು ಹಾಕಿಕೊಂಡ ಹೋರಾಟಗಾರರಿಂದಲೂ ಸರಿಯಾದ ರೀತಿಯಲ್ಲಿ ಹೋರಾಟ ನಡೆದಿಲ್ಲ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರುತಲಿದ್ದು, ಭವಿಷ್ಯ ದೃಷ್ಟಿಯಿಂದ ಫ್ಲೈ ಓವರ್ ಅಥವಾ ಹೆದ್ದಾರಿ ಅಗಲೀಕರಣ 45 ಮೀಟರ್ ಮಾಡಿ ಹೆದ್ದಾರಿ ಕಾಮಗಾರಿ ನಡೆಸಬೇಕಿದೆ.
ಅಧಿಕಾರದಲ್ಲಿದ್ದ್ದಾಗ ಒಂದು, ಇಲ್ಲದಿದ್ದಾಗ ಒಂದು…
ತಾಲೂಕಿನ ನಿವಾಸಿಗಳಿಗೆ ಎರಡೂ ಪ್ರಮುಖ ಪಕ್ಷದ ಜನಪ್ರತಿನಿಧಿಗಳು ಕಣ್ಣಿಗೆ ಮಣ್ಣೆರಚುವ ಕಾರ್ಯ ನಡೆಸುತ್ತಿದ್ದು, ಅಧಿಕಾರ ಇದ್ದಾಗ ಮನವಿ ಸ್ವೀಕರಿಸಿ ಭರವಸೆ ನೀಡುವ ಜನಪ್ರತಿನಿಧಿಗಳು, ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ನಡೆಸಿ ಬಹಿರಂಗ ಸಮಾವೇಶ ನಡೆಸಿ ಭಾಷಣ ಮಾಡುವುದಕ್ಕೆ ಮಾತ್ರ ಸಿಮೀತವಾಗಿದ್ದಾರೆ. ಆರಂಭದಲ್ಲಿ ರಾಜ್ಯದಲ್ಲಿಯೂ ಕಾಂಗ್ರೆಸ್ ಹಾಗೂ ತಾಲೂಕಿನ ಎರಡು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದರು. ನಂತರ ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಎರಡು ಕ್ಷೇತ್ರದಲ್ಲಿ ಬಿಜೆಪಿಯ ಬೆಂಬಿಲತರೆ ಶಾಸಕರು ಹಾಗೂ ಸಂಸದರಿದ್ದರೂ ನ್ಯಾಯ ಸಿಕ್ಕಿಲ್ಲ. ಹೊನ್ನಾವರ ಕೇವಲ ಮತ ಪಡೆಯುದಕ್ಕೆ ಮಾತ್ರ ರಾಜಕಾರಣಿಗಳು ಸಿಮೀತವಾಗಿದ್ದಾರೆ ಎನ್ನುವುದು ತಾಲೂಕಿನ ಜನತೆಯ ಆರೋಪವಾಗಿದೆ.