ಕೊರೋನಾ ತಡೆಗೆ ಟೊಂಕ ಕಟ್ಟಿ ನಿಂತ ಎ.ಸಿ ಎಂ ಅಜಿತ್

ಕುಮಟಾ: ಜಗತ್ತಿನಾದ್ಯಂತ ಕೋವಿಡ್-19 ಮಹಾ ಮಾರಿ ಜನತೆಯನ್ನು ತಲ್ಲಣಗೊಳಿಸಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ದೇಶ, ರಾಜ್ಯ, ಜಿಲ್ಲೆಗೂ ಕಿಲ್ಲರ್ ಕೊರೋನಾ ಕದಂಬಬಾಹು ಚಾಚಿದೆ. ಇಂತಹ ಸಂಧಿಗ್ದ ಸ್ಥಿತಿಯಲ್ಲಿ ಉಪವಿಭಾಗಾಧಿಕಾರಿ ಎಮ್.ಅಜಿತ್ ಹಗಲಿರುಳು ಶ್ರಮಿಸುತ್ತಾ, ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಹುರಿದುಂಬಿಸಿ ತಡೆಗೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ.
ಕೋವಿಡ್-19 ಕಾಯಿಲೆ ಹರಡಲಿರುವ ಮುನ್ನೇಚ್ಚರಿಕೆಯಲ್ಲಿ ತಾಲೂಕು ಆಡಳಿತ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಂಡಿತ್ತು. ಇದಕ್ಕೆಲ್ಲಾ ಮೂರ್ತಸ್ವರೂಪ ನೀಡಿದವರು ಎಮ್.ಅಜಿತ್. ಓರ್ವ ಸಹಾಯಕ ಆಯುಕ್ತರಾಗಿ ತನ್ನ ಹುದ್ದೆಯ ದರ್ಪ ಮೆರೆಯದೆ ಎಲ್ಲರೊಳಗೊಂದಾಗು ಎನ್ನುವ ಮನೋಭಾವದೊಂದಿಗೆ ಕೊರೋನಾ ತಡೆಗೆ ಮುಂದಾದರು. ಪ್ರತಿ ಕ್ಷಣ,ನಿಮಿಷ ತನ್ನ ಉಪವಿಭಾಗದ ಜನತೆಯ ಆರೋಗ್ಯ ರಕ್ಷಣೆಗಾಗಿ ಕಟಿಬದ್ದರಾದರು. ಜಿಲ್ಲಾಧಿಕಾರಿಗಳು ಹಾಗೂ ಶಾಸಕ ದಿನಕರ ಶೆಟ್ಟಿಯವರ ನಿರ್ದೇಶನದ ಮೆರೆಗೆ ತಹಸೀಲ್ದಾರ ಮೇಘರಾಜ ನಾಯ್ಕ ಸೇರಿದಂತೆ ಕಂದಾಯ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಉತ್ತಮ ಕಾರ್ಯ ಮಾಡುತ್ತಿರುವುದು ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಮಾನವೀಯ ಮನೋಭಾವದ ಎಮ್.ಅಜಿತ್ ಉಪವಿಭಾಗದ ಅಧಿಕಾರ ವಹಿಸಿಕೊಂಡ ಸಮಯದಲ್ಲೇ ಜನಾನುರಾಗಿ ಅಧಿಕಾರಿಯಾಗಿ ಜನಮಾನಸದಲ್ಲಿ ನೆಲೆ ನಿಂತಿರುವುದು ಅವರ ನಿಶ್ವಾರ್ಥ,ಸಹೃದಯಿ ವ್ಯಕ್ತಿತ್ವಕ್ಕೆ ಹಿಡಿದ ಕೈಗನಗನ್ನಡಿಯಾಗಿದೆ.
ಪ್ರಜ್ಞಾವಂತರೆಂದು ಕರೆಯಿಸಿಕೊಳ್ಳುವ ಕುಮಟಾದ ಜನತೆ ಯಾವುದೇ ಅಧಿಕಾರಿ ತಾಲೂಕಿಗೆ ಬಂದರೂ ಆದರೆತೆಯಿಂದ ಸ್ವಿಕರಿಸುವ ಮನೊಭಾವ ಹೊಂದಿರುವುದು ಇಲ್ಲಿನವರ ವಿಶೇಷತೆ. ಹಾಗಂತ ಇಲ್ಲಿಗೆ ಬಂದವರೆಲ್ಲ ದಕ್ಷರು ಅಂತ ಹೋಗಳಿಸಿಕೊಂಡಿಲ್ಲ. ಬದಲಿಗೆ ಉಂಡು ಹೋದ ಕೊಂಡು ಹೋದ ಅದೆಷ್ಟೊ ಅಧಿಕಾರಿಗಳ ಜ್ವಲಂತ ಉದಾರಣೆ ನಮ್ಮ ಮುಂದಿದೆ. ಅಲ್ಲದೇ ನಮ್ಮ ರಾಜಕಾರಣಿಗಳು ಅದೆಷ್ಟೊ ಅಧಿಕಾರಿಗಳನ್ನು ತಮ್ಮ ಸ್ವಹಿತಕ್ಕೆ ಬಳಸಿಕೊಂಡು ಬಿಸಾಡಿದ ದೃಷ್ಠಾಂತಗಳು ಕಣ್ಣೆದುರಿಗಿದೆ.
ಗಂಗೂ ಬಾಯಿ ಮಾನಕರ, ಲಕ್ಷ್ಮಿ ಪ್ರೀಯಾ, ಚಿದಾನಂದ ವಟಾರೆಯವರಂತ ಅದೇಷ್ಟೋ ಉಪವಿಭಾಗಾಧಿಕಾರಿಗಳು ಸಹೃದಯಿಗಾಳಾಗಿ ಜನಾರಾಗಿಗಳಾಗಿದ್ದಾರೆ. ಇಂತವರ ಸಾಲಿನಲ್ಲಿ ಪ್ರಸ್ತುತ ಸಹಾಯಕ ಆಯುಕ್ತರಾದ ಎಂ.ಅಜಿತ್ ನಿಂತಿರುವುದು ಉಪವಿಭಾಗಕ್ಕೆ ಸಂತಸದ ಸಂಗತಿ.
ಎಂ.ಅಜಿತ್ ದಕ್ಕಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಪ್ರಾಥಮಿಕ,ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಪುತ್ತೂರಿನಲ್ಲಿ ಮುಗಿಸಿದ ಇವರು ಬೆಂಗಳೂರಿನ ಪ್ರತಿಷ್ಠಿತ ಆರ್.ವಿ.ಕಾಲೇಜಿನಲ್ಲಿ ಇಂನಜೀಯರಿಂಗ್ ಪದವಿ ಪಡೆದು 2017 ರಲ್ಲಿ ಶಿವಮೊಗ್ಗಾ ಹಾಗೂ ಗದಗ ಜಿಲ್ಲೆಗಳಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಯಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. 2018-19 ರಲ್ಲಿ ಹೊನ್ನಾವರದ ಹೆದ್ದಾರಿ ಇಲಾಖೆಯಲ್ಲಿ ಮುಖ್ಯ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿದರು.
ಹೊನ್ನಾವರ ವಿಭಾಗದ ಹೆದ್ದಾರಿ ಇಲಾಖೆಯ ದಕ್ಷ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ ಆಡಳಿತಾತ್ಮಕ ಸೇವೆಯನ್ನು ಪರಿಗಣಿಸಿ ಅವರನ್ನು ಕುಮಟಾ ಉಪವಿಭಾಗದ ಪ್ರಭಾರಿ ಎ.ಸಿ ಯಾಗಿ ನಿಯುಕ್ತಿಗೊಳಿಸಲಾಯಿತು. ನಂತರದಲ್ಲಿ ತಮ್ಮ ಕ್ರೀಯಾಶೀಲ ಸೇವೆಯ ಮೂಲಕ ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮಾ.14 ರಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದ ಜನತಾ ಕಪ್ರ್ಯೂಗೆ ಕುಮಟಾದ ಜನತೆ ಅಭೂತಪೂರ್ವ ಸ್ಪಂದನೆ ನೀಡಿದ ಬೆನ್ನಲ್ಲೇ ಮತ್ತೆ 21 ದಿನಗಳ ಕಾಲ ಮನೆಯಿಂದ ಹೋರ ಬರದಂತೆ ನೀಡಲಾದ ಕರೆಗೆ ಭಾಗಶ: ತಾಲೂಕಿನ ಜನತೆ ಸ್ಪಂದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನ ಹರಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಅದೇ ರೀತಿ ಉಪವಿಭಾಗದ ದಂಡಾಧಿಕಾರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಹರ ಸಾಹಸ ಪಡುತ್ತಿದ್ದಾರೆ. ರಾಜ್ಯದ ಪೊಲೀಸರು ದರ್ಪ ಮೆರೆದಿದ್ದಾರೆನ್ನುವ ಆರೋಪ ಕೇಳಿ ಬಂದರೂ ಕುಮಟಾದ ಮಟ್ಟಿಗೆ ಇಂತಹ ಆರೋಪ ಕೇಳಿ ಬಂದಿಲ್ಲ. ಇದಕ್ಕೆಲ್ಲಾ ಸ್ಪೂರ್ತಿ ನೀಡಿದವರು ಎಮ್.ಅಜಿತ್.
ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ಕಾಯಿಲೆ ತಾಂಡವವಾಡುತ್ತಿರುವಾಗ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಹಿರಿ,ಕಿರಿಯ ವೈದ್ಯರೊಂದಿಗೆ ಸಮಾಲೋಚಿಸಿ ಸಮರೋಪಾದಿಯಲ್ಲಿ ಕೊರೋನಾ ಕಾಯಿಲೆಯ ವಿರುದ್ದ ಹೋರಾಡಲು ಹರಸಾಹಸ ಪಡುತ್ತಿದ್ದಾರೆ.
ಹಳ್ಳಿಗಳಿಂದಲೇ ಕೂಡಿರುವ ಕುಮಟಾ ಉಪವಿಭಾಗದಲ್ಲಿ ಪಟ್ಟಣ ಹಾಗೂ ಹಳ್ಳಿಯ ಜನತೆಯಲ್ಲಿ ಕೊರೋನಾ ಕಾಯಲೆಯ ಕರಿತು ಅರಿವು ಮೂಡಿಸಿ ಅದರ ಗಾಂರ್ಭಿಯತೆಯನ್ನು ತಿಳಿಹೇಳಿ ಮನೆಯಿಂದ ಹೋರಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇಂತಹ ಜನಾನುರಾಗಿ ದಕ್ಷ ಅಧಿಕಾರಿಯ ಮುಂದಾಲೋಚನಾ ಕ್ರಮದಿಂದ ಉಪವಿಭಾಗದಲ್ಲಿ ಕೊರೋನಾ ಕಾಯಿಲೆ ಬಾರದಿರಲಿ. ಇಂತಹ ನಿಶ್ವಾರ್ಥ, ದಕ್ಷ, ಜನತೆಯ ಹಿತಕ್ಕಾಗಿ ಶ್ರಮಿಸುತ್ತಿರುವ ಅವರು ಇನ್ನಷ್ಟು ವರ್ಷಗಳ ಕಾಲ ಕುಮಟಾದಲ್ಲೇ ಉಳಿದು ಉಪವಿಭಾಗ ಜಿಲ್ಲೆಯಲ್ಲಿಯೇ ಮಾದರಿ ಉಪವಿಭಾಗವಾಗಿ ಹೆಸರುಗಳಿಸುವಂತಾಗಲಿ ಎಂಬುದು ಜನತೆಯ ಆಶಯವಾಗಿದೆ.